ಪ್ಯಾಲೆಸ್ತೀನಿಯರಿಗೆ ಅವರ ಹಕ್ಕು ಮತ್ತು ತಾಯ್ನಾಡನ್ನು ನಿರಾಕರಿಸಲಾಗಿದೆ: ಜೈಶಂಕರ್

Prasthutha|

ಲಾಲಂಪುರ: ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟಿನ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿಕೆ ನೀಡಿದ್ದಾರೆ. ಸರಿ, ತಪ್ಪುಗಳೇನೇ ಇರಲಿ ಪ್ಯಾಲೆಸ್ತೀನಿಯರಿಗೆ ಅವರ ಹಕ್ಕುಗಳನ್ನು ಮತ್ತು ತಾಯ್ನಾಡನ್ನು ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

ಪ್ರತಿಯೊಂದು ಪ್ರತಿಕ್ರಿಯೆಗೂ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.

ಮಲೇಶ್ಯಾ ಪ್ರವಾಸದಲ್ಲಿರುವ ಸಚಿವರು ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

- Advertisement -

ಆಕ್ಟೋಬರ್ 7ರಂದು ಇಸ್ರೇಲ್ ನೆಲದಲ್ಲಿ ನಡೆದ ಘಟನೆ ಭಯೋತ್ಪಾದಕ ಕೃತ್ಯವಾಗಿದೆ ಎಂದು ಪುನರುಚ್ಚರಿಸಿದ ಜೈಶಂಕರ್, ಗಾಝಾದಲ್ಲಿ ಅಮಾಯಕ ನಾಗರಿಕರ ಸಾವನ್ನು ಯಾರೂ ಕೂಡಾ ಸಹಿಸಿಕೊಳ್ಳಲು ಸಾಧ್ಯವಿಲ್ಲ. ದೇಶಗಳು ಈ ಕೃತ್ಯವನ್ನು ಅವುಗಳ ಮನಸ್ಸಿಗೆ ತೋಚಿದ ರೀತಿಯಲ್ಲಿ ಸಮರ್ಥಿಸಿಕೊಳ್ಳಬುಹುದು. ಆದರೆ ಅದಕ್ಕೆ ಮುನ್ನ ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಸರಿ ತಪ್ಪುಗಳು ಯಾವುದೇ ಇರಲಿ, ಪ್ಯಾಲೆಸ್ತೀನಿಯರಿಗೆ ಅವರ ತಾಯ್ನಾಡನ್ನು ನಿರಾಕರಿಸಲಾಗುತ್ತಿದೆ ಎಂಬುದು ವಾಸ್ತವ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.



Join Whatsapp