ಶರಣ್ ಪಂಪ್ವೆಲ್’ನನ್ನು ನಿಷ್ಠಾವಂತ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿದರೆ ಕೆಫೆ ಬಾಂಬರ್ ಮೂಲ ಪತ್ತೆ ಸಾಧ್ಯ: ಎಸ್‌ ಡಿಪಿಐ

Prasthutha|

ಮಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ವಿಶ್ವಹಿಂದು ಪರಿಷತ್ ನಾಯಕ ಶರಣ್ ಪಂಪ್ವೆಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಮಸೀದಿ ಮದ್ರಸಾಗಳಿಗೆ ದಾಳಿ ನಡೆಸಿದ್ರೆ ಆರೋಪಿ ಪತ್ತೆಯಾಗಬಹುದು ಎಂಬ ಹೇಳಿಕೆಗೆ ಎಸ್‌ ಡಿಪಿಐ ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ‌.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರ್ ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣದ ನೈಜ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.ಆದರೆ ಸಂಘಪರಿವಾರ ಹಾಗೂ ಬಿಜೆಪಿ ಅದನ್ನು ಆರೋಪಿಗಳು ಪತ್ತೆಯಾಗುವ ಮೊದಲೇ ಆ ಘಟನೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತರ ನಡೆಸುತ್ತಿದೆ.

ಅದರ ಮುಂದುವರಿದ ಭಾಗವಾಗಿ ಶರಣ್ ಪಂಪ್ವೆಲ್ ಎಂಬ ಕೋಮು ಕ್ರಿಮಿ ಈ ರೀತಿಯ ಹೇಳಿಕೆ ನೀಡಿ ಗಲಭೆ ಎಬ್ಬಿಸಲು ಪ್ರಯತ್ನ ಪಡುತ್ತಿದ್ದಾನೆ.

- Advertisement -

ಚುನಾವಣಾ ಸಮಯ ಹತ್ತಿರ ಬಂದಾಗ ಬಾಂಬ್ ಸ್ಪೋಟಿಸುವುದು,ಕೋಮು ಗಲಭೆ ನಡೆಸುವುದು ಬಿಜೆಪಿ ಸಂಘಪರಿವಾರದ ದೊಡ್ಡ ಹವ್ಯಾಸಗಳಲ್ಲಿ ಒಂದು ಎಂದು ದೇಶವೇ ತಿಳಿದಿರುವ ಸತ್ಯ.ಹಾಗಾಗಿ ಬೆಂಗಳೂರು ಸ್ಪೋಟ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದರೆ ಅದರ ಮೂಲ ಕೇಶವಕೃಪ ಅಥವಾ ಸಂಘನಿಕೇತನಕ್ಕೂ ಬರಬಹುದು,ಆ ಸ್ಪೋಟದ ಹಿಂದಿನ ರುವಾರಿ ಇದೇ ಶರಣ್ ಪಂಪ್ವೆಲ್ ಆಗಿರಲೂ ಬಹುದು,ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಯಾಕೆಂದರೆ ಈತ ಈ ಹಿಂದೆ ಅದೆಷ್ಟೋ ಕೋಮು ಗಲಭೆ ಹಲ್ಲೆ,ಕೊಲೆ ಎಲ್ಲವನ್ನೂ ನಡೆಸಿ FIR ದಾಖಲಾಗಿದ್ದರು ಒಮ್ಮೆಯು ಈತನ ಬಂಧನವಾಗಿಲ್ಲ ಹಾಗೂ ಒಂದು ಪ್ರಕರಣದಲ್ಲಿ ಕೂಡ ಈತನಿಗೆ ಶಿಕ್ಷೆಯಾಗಿಲ್ಲ,ಹಾಗಾಗಿ ಅದೇ ಭರವಸೆಯಿಂದ ಈತ ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿದ್ದಾನೆ. ಎಲ್ಲವನ್ನೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದರೆ ಈತನ ಪಾತ್ರವು ಪತ್ತೆಯಾಗಬಹುದೆಂದು ಅವರು ಸರ್ಕಾರ ಹಾಗೂ ಪೋಲಿಸ್ ಇಲಾಖೆಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ



Join Whatsapp