ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಗೆಲ್ಲುವ ಗುರಿ ಇದೆ. ಆದರೆ 28ಕ್ಕೆ 25 ಗೆದ್ದೇ ಗೆಲ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಡಾಲರ್ಸ್ ಕಾಲೋನಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಇವತ್ತು ಪಟ್ಟಿ ಕರ್ನಾಟಕದ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ. ವಿಜಯೇಂದ್ರ ದೆಹಲಿಯಲ್ಲೇ ಇದ್ದಾರೆ. ಇವತ್ತು ಚರ್ಚೆ ಮಾಡಿ, ಪಟ್ಟಿ ಅಂತಿಮ ಆಗಲಿದೆ. 28ಕ್ಕೆ 28ಗೆಲ್ಲುವ ಗುರಿ ಇದೆ, 28ಕ್ಕೆ 25 ಗೆದ್ದೇ ಗೆಲ್ತೀವಿ ಎಂದರು.