ನಾಳೆ ಕೇಂದ್ರ ಸರ್ಕಾರದೊಂದಿಗೆ ರೈತ ಮುಖಂಡರ ಮಾತುಕತೆ

Prasthutha|

ನವದೆಹಲಿ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು‌ ಕೇಂದ್ರ ಸರಕಾರದ ಮಧ್ಯೆ ಮಾತುಕತೆಗೆ ವೇದಿಕೆ ಸಿದ್ದವಾಗಿದ್ದು, ರೈತರ ಬೇಡಿಕೆಗಳು ಈಡೇರುವ ಸಾಧ್ಯತೆ ಹೆಚ್ಚಾಗಿದೆ.

- Advertisement -

ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಪಂಧೇರ್, ರೈತರು ಯಾವುದೇ ಸಂಘರ್ಷವನ್ನ ಬಯಸುವುದಿಲ್ಲ ಎಂದು ಹೇಳಿದ್ದು, ಕೇಂದ್ರ ಸರಕಾರದೊಂದಿಗೆ ನಾಳೆ (ಫೆಬ್ರವರಿ 15) ಸಂಜೆ 5 ಗಂಟೆಗೆ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಅವರೊಂದಿಗೆ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.



Join Whatsapp