ಭಾರತದ 9 ಮಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡ ಬ್ರಿಟನ್

Prasthutha|

ಲಂಡನ್: ಭಾರತ ಮೂಲದ 9 ಮಂದಿಯ ತಂಡದ ಮೇಲೆ ಬ್ರಿಟನ್ ಅಧಿಕಾರಿಗಳು ಗಂಭೀರ ಸ್ವರೂಪದ ಅಪರಾಧಗಳ ಕೃತ್ಯ ತಡೆ ಆದೇಶಗಳನ್ನು ಹೇರಿದ್ದಾರೆ. ಸರಕುಗಳು ಮತ್ತು ವಲಸಿಗರ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ದೋಷಿಗಳಾಗಿರುವ ವ್ಯಕ್ತಿಗಳ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಭಾರತೀಯ ಮೂಲದ ಸ್ವಂದೇರ್ ಧಲ್, ಜಸ್ಬೀರ್ ಕಪೂರ್, ದಿಲಿಯನ್, ಚರಣ್ ಸಿಂಗ್, ವಲ್ಜೀತ್ ಸಿಂಗ್, ಜಸ್ಬಿರ್ ಧಲ್ ಸಿಂಗ್, ಜಗಿಂದರ್ ಕಪೂರ್, ಜಕ್ದರ್‌ ಕಪೂರ್, ಅಮರ್‌ಜೀತ್‌ ಅಲಬಾದಿಸ್‌ ಬ್ರಿಟನ್‌ನಲ್ಲಿ ಕಠಿಣ ಕ್ರಮಕ್ಕೆ ಒಳಗಾದ ಭಾರತೀಯ ವ್ಯಕ್ತಿಗಳಾಗಿದ್ದಾರೆ.

ಬ್ರಿಟನ್‌ನಿಂದ ದುಬೈಗೆ ಸುಮಾರು ₹161 ಕೋಟಿ (15.5 ಮಿಲಿಯನ್ ಪೌಂಡ್‌) ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಹಾಗೂ 17 ವಲಸಿಗರ ಅಕ್ರಮ ಸಾಗಣೆ ಯತ್ನ ಪ್ರಕರಣದಲ್ಲಿ ಈ ಗುಂಪು ಶಾಮೀಲಾಗಿರುವುದು ಸಾಬೀತಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ದೋಷಿಯಾಗಿರುವ ಈ ಗುಂಪಿನ ಮೇಲೆ ಎಸ್‌ಸಿಪಿಒಗಳನ್ನು ಹೇರಲಾಗಿದೆ.

- Advertisement -

ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಮೇಲೆ ಎಸ್‌ಸಿಪಿಒ ಹೇರಲಾಗುವುದು. ಆ ಬಳಿಕ ಅವರ ಹಣಕಾಸು, ಆಸ್ತಿ, ಬ್ಯಾಂಕ್ ಖಾತೆಗಳು ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಟಿಕೆಟ್‌ಗಳ ಖರೀದಿ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Join Whatsapp