ಪತ್ನಿಯ ಹತ್ಯೆಗೈದು ರುಂಡದೊಂದಿಗೆ ಅಲೆದಾಡಿದ ಪತಿ!

Prasthutha|

ಕೋಲ್ಕತಾ: ಪತ್ನಿಯ ಹತ್ಯೆ ಮಾಡಿ ಶವದ ತಲೆ ಕಡಿದು ಕೈಯಲ್ಲಿ ಹಿಡಿದುಕೊಂಡು ಅಲೆದಾಡುತ್ತಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದ ಬುಧವಾರ ತಿಳಿಸಿದ್ದಾರೆ.

- Advertisement -

ಗೌತಮ್ ಗುಚ್ಚೈತ್ (40) ಬಂಧಿತ ವ್ಯಕ್ತಿ. ರಕ್ತದಲ್ಲಿ ತೊಯ್ದು ಮಹಿಳೆಯ ರುಂಡದೊಂದಿಗೆ ಅಲೆದಾಡುತ್ತಿದ್ದ ಗೌತಮ್ ನನ್ಬು ಚಿಸ್ತಿಪುರ ಬಸ್ ನಿಲ್ದಾಣದ ಬಳಿ ಸ್ಥಳೀಯರು ಗಮನಿಸಿದ್ದಾರೆ. ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

- Advertisement -

ಪೊಲೀಸರ ಪ್ರಕಾರ, ಗೌತಮ್ ಗುಚ್ಚೈತ್ ಮಾನಸಿಕವಾಗಿ ಅಸ್ಥಿರವಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ತುಂಡರಿಸಿದ್ದಾನೆ.

ಗೌತಮ್ ಗುಚ್ಚೈತ್‌ನನ್ನು ಬಂಧಿಸಿದ ಪೊಲೀಸರು ಆತನ ಮನೆಯನ್ನು ಹುಡುಕಿ ಹೆಂಡತಿಯ ಶವವನ್ನು ಕಂಡುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Join Whatsapp