ದುಬೈ: ಯಮೆನ್ ಅನ್ನು ಗುರಿಯಾಗಿಸಿಕೊಂಡು ಅಮೆರಿಕ ನೇತೃತ್ವದ ವೈಮಾನಿಕ ದಾಳಿಯಲ್ಲಿ 5 ಮಂದಿ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಹೌತಿ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸ್ಯಾರಿ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಮೆನ್ ಜನರ ವಿರುದ್ಧದ ತಮ್ಮ ಆಕ್ರಮಣಶೀಲತೆಯ ಸಂಪೂರ್ಣ ಜವಾಬ್ದಾರಿಯನ್ನು ಅಮೆರಿಕ ಮತ್ತು ಬ್ರಿಟನ್ ವೈರಿಗಳು ಹೊರಬೇಕಾಗುತ್ತದೆ ಎಂದ ಸ್ಯಾರಿ, ಇದಕ್ಕಾಗಿ ಅವರು ಉತ್ತರ ನೀಡಬೇಕಾಗುತ್ತದೆ ಮತ್ತು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಹೌತಿಗಳ ಹತೋಟಿಯಲ್ಲಿರುವ ಯಮೆನ್ನ ಐದು ಪ್ರದೇಶಗಳಲ್ಲಿ 73 ದಾಳಿಗಳು ನಡೆದಿವೆ ಎಂದೂ ಅವರು ಹೇಳಿದ್ದಾರೆ.