ಕಾಸರಗೋಡು: ನದಿಯಲ್ಲಿ ಸಿಕ್ಕಿದ್ದ ಮೃತದೇಹದ ಗುರುತು ಪತ್ತೆ

Prasthutha|

ಕಾಸರಗೋಡು: ಹೊಸಂಗಡಿ ಬಳಿಯ ಕೊಪ್ಪಳ ಕಜೆಯ ನದಿಯಲ್ಲಿ ಪತ್ತೆಯಾಗಿದ್ದ ಮೃತ ದೇಹದ ಗುರುತು ಪತ್ತೆಯಾಗಿದೆ.

- Advertisement -

ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದ ಮೃತ ದೇಹದ ಗುರುತನ್ನು ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ.

ಸುರತ್ಕಲ್ ಕೃಷ್ಣಾಪುರದ ಇಹಾಬ್ ಅಬೂಬಕ್ಕರ್ (20) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

- Advertisement -

ಬುಧವಾರ ಸಂಜೆ ಮಂಜೇಶ್ವರ ಕೊಪ್ಪಳ ನದಿಯಲ್ಲಿ ಅಪರಿಚಿತ ಯುವಕನ ಮೃತ ದೇಹ ಪತ್ತೆಯಾಗಿತ್ತು. ಮಂಜೇಶ್ವರ ಠಾಣಾ ಪೊಲೀಸರು ಕರ್ನಾಟಕ ಪೊಲೀಸರಿಗೂ ಮಾಹಿತಿ ನೀಡಿದ್ದರು.

ಮೃತ ಇಹಾಬ್ ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಕೆಲ ದಿನಗಳ ಹಿಂದೆ ತಲಪಾಡಿ ಪರಿಸರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಬಳಿಕ ನಾಪತ್ತೆಯಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಬುಧವಾರ ಸಂಜೆ ಕೊಪ್ಪಳ ನದಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು.

ಹೆಚ್ಚಿನ‌ ಮಾಹಿತಿ ತಿಳಿದುಬಂದಿಲ್ಲ.

Join Whatsapp