ಗೂಗಲ್‌ನಿಂದ ಮತ್ತೆ 30 ಸಿಬ್ಬಂದಿಯನ್ನು ವಜಾಗೊಳಿಸಲು ಸಿದ್ಧತೆ

Prasthutha|

ನ್ಯೂಯಾರ್ಕ್‌: ಕೆಲ ದಿನಗಳ ಹಿಂದೆ ಪೇಟಿಎಂ ಎ.ಐ. ವ್ಯವಸ್ಥೆಯನ್ನು ಅಳವಡಿಸಿಕೊಂಡ ಕಾರಣ ಹತ್ತು ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರ ಕೈಗೊಂಡಿದ್ದ ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌, ಇದೀಗ ಹೊಸ ಆವೃತ್ತಿಯ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ. ಇದರಿಂದಾಗಿ ಸಂಸ್ಥೆಯಿಂದ ಇನ್ನೂ 30 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆ ಹುಟ್ಟಿಕೊಂಡಿದೆ.

- Advertisement -

ಸಂಸ್ಥೆಯಿಂದ ಈಗಾಗಲೇ 12 ಸಾವಿರ ಮಂದಿಯನ್ನು ತೆಗೆದು ಹಾಕಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೂಗಲ್‌ ಸಿಇಒ , ಬದಲಾಗುತ್ತಿರುವ ಔದ್ಯಮಿಕ ಆದ್ಯತೆಗಳಿಂದಾಗಿ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಬೇಕಾಗಿದೆ. ಇದರಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಪುನರ್‌ ರಚನೆ ಆಗಬೇಕಾದ ಅನಿವಾರ್ಯವಿದೆ. ಜತೆಗೆ ಉದ್ಯೋಗ ಕಡಿತ ಕೂಡ ಅನಿವಾರ್ಯ ಎಂದಿದ್ದಾರೆ.

- Advertisement -

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಅದರ ಸಹವರ್ತಿ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರ ನೌಕರಿಗೆ ಕತ್ತರಿಯಾಗಿ ಪರಿಣಮಿಸಿದ ಕೃತಕ ಬುದ್ಧಿಮತ್ತೆ (ಎ.ಐ.)ಯಿಂದ ಮತ್ತಷ್ಟು ಸವಾಲಿನ ದಿನಗಳು ಉದ್ಭವಿಸಲಿವೆ.



Join Whatsapp