ಕೇಂದ್ರ ಮೀಸಲು ಪೊಲೀಸ್ ಪಡೆಯ ನೂತನ DGಯಾಗಿ ನೇಮಕವಾದ ಅನೀಶ್ ದಯಾಳ್ ಸಿಂಗ್

Prasthutha|

ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮುಖ್ಯಸ್ಥ ಅನೀಶ್ ದಯಾಳ್ ಸಿಂಗ್ ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕರಾಗಿ ನೇಮಕವಾಗಿದ್ದಾರೆ.

- Advertisement -

ಮಣಿಪುರ ಕೇಡರ್‌ನ 1988 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್, ನವೆಂಬರ್ 30 ರಂದು ಹಾಲಿ ಎಸ್.ಎಲ್.ಥೋಸೆನ್ ನಿವೃತ್ತರಾದ ನಂತರ ಸಿಆರ್ಪಿಎಫ್‌ನ ಹೆಚ್ಚುವರಿ ಉಸ್ತುವಾರಿಯನ್ನು ಹೊಂದಿದ್ದರು.

ಪ್ರಸ್ತುತ ಗುಪ್ತಚರ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿರುವ ರಾಹುಲ್ ರಸಗೋತ್ರಾ ಅವರನ್ನು ಸಿಂಗ್ ಅವರ ಬದಲಿಗೆ ಹೊಸ ಐಟಿಬಿಪಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Join Whatsapp