ವಿದ್ಯಾರ್ಥಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮುಖ್ಯ ಶಿಕ್ಷಕಿ ಅಮಾನತು

Prasthutha|

ಚಿಕ್ಕಬಳ್ಳಾಪುರ: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಸುದ್ದಿಯಾಗಿದ್ದ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಪುಪ್ಪಲತಾರನ್ನು ಸೇವೆಯಿಂದ ಅನುಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.

- Advertisement -

ಶಿಕ್ಷಕ ಪುಪ್ಪಲತಾ, ಇತ್ತೀಚೆಗೆ ಶಾಲೆಯಿಂದ ಕೈಗೊಂಡಿದ್ದ ಶೈಕ್ಷಣಿಕ ಪ್ರವಾಸದ ವೇಳೆ ಶಾಲೆಯ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ತೆಂಗಿನ ತೋಟಗಳ ಮಧ್ಯೆ ಪರಸ್ಪರ ಕಿಸ್ ಕೊಡುವ ಪೋಟೋಗಳನ್ನು ತನ್ನ ಮೊಬೈಲ್ ಮೂಲಕ ಸೆರೆ ಹಿಡಿದುಕೊಂಡಿದ್ದರು. ಅವು ಶಿಕ್ಷಕಿಯ ಮೊಬೈಲ್‌ ನಿಂದ ಸೋರಿಕೆಯಾಗಿ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶಿಕ್ಷಕಿ ವಿರುದ್ದ ಗಂಭೀರ ಆರೋಪ ಕೇಳಿ ಬಂದ ಬೆನ್ನಲೇ ಶಾಲೆಗೆ ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಭೇಟಿ ನೀಡಿದ್ದರು.

Join Whatsapp