ಉತ್ತರಾಖಂಡ: ಕೊನೆಗೂ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರು

Prasthutha|

ಉತ್ತರಾಖಂಡ: ಇಡೀ ದೇಶವೇ ಕಾಯುತ್ತಿರುವ ಶುಭಸುದ್ದಿ ಸಿಕ್ಕಿದೆ. ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸುಖಾಂತ್ಯವಾಗಿದೆ. ಕತ್ತಲೆಯ ಸುರಂಗವಾಸದಿಂದ 41 ಕಾರ್ಮಿಕರು ಹೊರಬಂದಿದ್ದಾರೆ. ಈ ಮೂಲಕ 17 ದಿನಗಳ ಕಾಲ ಜನಸಾಮಾನ್ಯರಿಗೆ ಊಹಿಸಲೂ ಸಾಧ್ಯವಿಲ್ಲದ ಕಷ್ಟದ ಜೀವನದಿಂ ಕೊನೆಗೂ ಕಾರ್ಮಿಕರು ಮುಕ್ತಿ ಪಡೆದಿದ್ದಾರೆ.

- Advertisement -

ಸಿಲ್ಕ್ಯಾರಾ ಸುರಂಗದ ಹೊರಗೆ ವೈದ್ಯರ ತಂಡದೊಂದಿಗೆ 41 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು. ಹೊರ ಬಂದ ಕಾರ್ಮಿಕರಿಗೆ ಮಾನಸಿಕ ಮತ್ತು ದೈಹಿಕ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಕಳೆದ 17 ದಿನಗಳಿಂದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಮಳೆ, ಚಳಿಯ ನಡುವೆ ಕೊರೆಯುವ ಕೆಲಸ ಗುರಿ ತಲುಪಲು ಬರೋಬ್ಬರಿ 17 ದಿ‌ನಗಳನ್ನು ತೆಗೆದುಕೊಂಡಿತ್ತು.

- Advertisement -

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಪೈಪ್ ಮೂಲಕ ಆಹಾರ ಮತ್ತು ನೀರು ಸರಬರಾಜು ಮಾಡಲಾಗುತ್ತಿತ್ತು. ಜೊತೆಗೆ ವಾಕಿ ಟಾಕಿ ಮೂಲಕ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿತ್ತು. ಆದರೂ ಆ ಕಾರ್ಮಿಕರ ಜೀವನ ನೆನೆಸಿ ಇಡೀ ದೇಶವೇ ಮರುಕ ಪಡುತ್ತಿತ್ತು. ಇದೀಗ ನಿಟ್ಟುಸಿರುಬಿಡುವಂತಾಗಿದೆ.



Join Whatsapp