ಸಿಎಂ ಜನಸ್ಪಂದನ ಅಭಿನಂದನೀಯ: ಕುಮಾರಸ್ವಾಮಿ

Prasthutha|

ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲಾದರೂ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರಲ್ಲಾ, ಅದನ್ನು ನಾನು ಅಭಿನಂದಿಸುತ್ತೇನೆ. ಈಗ ಅವರಿಗೆ ರಾಜ್ಯದ ಜನತೆಯ ವಾಸ್ತವದ ಸ್ಥಿತಿ ಅರ್ಥವಾಗಿರಬಹುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಎಲ್ಲವನ್ನೂ ಟೀಕಿಸುವುದಿಲ್ಲ ಎಂದು ಇದೇ ಸಮಯ ಅವರು ಹೇಳಿದ್ದಾರೆ.

- Advertisement -

ಹಾಕತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಅಭಿನಂದನೆ ತಿಳಿಸಿದ ಕುಮಾರಸ್ವಾಮಿ, ನಾನು ಜನತಾ ದರ್ಶನ ಮಾಡಿದಾಗ ಮತ್ತು ಬಿಜೆಪಿಯ ಆರ್.ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮ ಮಾಡಿದಾಗ ಇದ್ದ ಸಮಸ್ಯೆಗಳು ಈಗಲೂ ಇವೆ. ಈಗ ಅಧಿಕಾರಿಗಳ ಕಾರ್ಯವೈಖರಿ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿರಬಹುದು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯ ಬರಗಾಲದ ಸ್ಥಿತಿಯಲ್ಲಿರುವಾಗ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆ ಸ್ಥಾನಮಾಡ ನೀಡುತ್ತಿರುವುದು ಎಷ್ಟು ಸರಿ ಎಂದು ಇದೇ ಸಂದರ್ಭ ಪ್ರಶ್ನಿಸಿದ ಅವರು, ಸಂಪುಟ ದರ್ಜೆ ನೀಡಲು ಆಗುವ ಖರ್ಚನ್ನು ಕಾಂಗ್ರೆಸ್ ಪಕ್ಷ ಭರಿಸುವುದಾದರೆ ಸರಿ. ಅದನ್ನು ಬಿಟ್ಟು ಜನರ ಹಣದಲ್ಲೇ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Join Whatsapp