50 ವಯಸ್ಸಾಯ್ತು, ಯಾರನ್ನಾದರೂ ಹುಡುಕಿಕೊಳ್ಳಿ: ರಾಹುಲ್​ ಗಾಂಧಿಗೆ ಉವೈಸಿ ಸಲಹೆ

Prasthutha|

ಹೈದರಾಬಾದ್: ರಾಹುಲ್ ಗಾಂಧಿಗೆ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀಮ್ ಉವೈಸಿ ಬಿಟ್ಟಿ ಸಲಹೆ ನೀಡಿದ್ದು, ಗಮನ ಸೆಳೆದಿದೆ. ನೀವು ಮಾತನಾಡುವ ಮುನ್ನ ಯೋಚಿಸಿ, ನಿಮಗೆ 50 ವರ್ಷ ದಾಟಿದೆ. ಒಂಟಿತನ ನಿಮ್ಮನ್ನು ಕಾಡುತ್ತಿರಬೇಕು, ಯಾರನ್ನಾದರೂ ಹುಡುಕಿ ಎಂದು ಉವೈಸಿ ರಾಹುಲ್ ಗಾಂಧಿಗೆ ಹೇಳಿದ್ದಾರೆ.

- Advertisement -

ಅಸಾದುದ್ದೀನ್ ಉವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಸ್ನೇಹಿತ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಉವೈಸಿ ಈ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

ನಾವು ಯಾರಿಗೂ ತೊಂದರೆ ನೀಡುವುದಿಲ್ಲ, ಆದರೆ, ಯಾರಾದರೂ ನಮ್ಮನ್ನು ಚುಡಾಯಿಸಿದರೆ ನಾವು ಅವರನ್ನು ಬಿಡುವುದಿಲ್ಲ ಎಂದು ಇದೇ ಸಂದರ್ಭ ಹೇಳಿದ್ದಾರೆ

Join Whatsapp