ಉಡುಪಿ: ಹಿಂದೂ ಧರ್ಮದ ಹೆಸರಲ್ಲಿ ಶಾಸಕನಾದ ವ್ಯಕ್ತಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಉಡುಪಿಯ ಬ್ರಹ್ಮಗಿರಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಕಳದ ಶಾಸಕರ ಸ್ವಾರ್ಥ, ಭ್ರಷ್ಟಚಾರಕ್ಕೆ ಈತ ದೇವರನ್ನೂ ಬಿಡಲ್ಲ, ರಾಜ್ಯದಲ್ಲಿ ಹಿಂದೂ ಸಮಾಜ ತಲೆತಗ್ಗಿಸುವಂತಾಗಿದೆ. ಹಿಂದೂ ಧರ್ಮದ ಹೆಸರಲ್ಲಿ ಶಾಸಕನಾದ ವ್ಯಕ್ತಿ ಈ ಮಟ್ಟಕ್ಕೆ ಇಳಿಯಬಾರದಿತ್ತು, ಉಡುಪಿ ದೇವರನಾಡು, ಇಲ್ಲೇ ಶಾಸಕನಿಂದ ಅಪಚಾರವಾಗಿದೆ. ಇಷ್ಟಾದರೂ ಸುನೀಲ್ ಬಾಯಿಮುಚ್ಚಿಕೊಂಡು ಕೂತಿರೋದು ಶೋಭೆ ತರಲ್ಲ, ಪವಿತ್ರ ಶಾಸಕ ಸ್ಥಾನಕ್ಕೆ ಕಳಂಕವಾಗಿದೆ ಎಂದು ತಿಳಿಸಿದ್ದಾರೆ.
ಕಾಮಗಾರಿಗೆ ಒಂದು ವರ್ಷಬೇಕು ಎಂದು ಇಂಜಿನಿಯರ್ ಗಳು ಹೇಳಿದ್ದರೂ, ಆದರೆ ಚುನಾವಣೆಯ ಲಾಭ ಪಡೆಯುವ ಕಾರಣಕ್ಕೆ 41 ದಿನದೊಳಗೆ ರಚನೆ ಮಾಡಿದ್ದಾರೆ. ಆ ಸ್ಥಳಕ್ಕೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಇಲ್ಲ, ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಆಗಿದೆ. ಬಡವರಿಗೊಂದು ಕಾನೂನು, ಅಧಿಕಾರದಲ್ಲಿರುವವರಿಗೊಂದು ಕಾನೂನು. ಜಿಲ್ಲಾಧಿಕಾರಿ, ಕಟ್ಟಡ ನಿರ್ಮಿಸಿದ ನಿರ್ಮಿತಿ ಕೇಂದ್ರದ ಮುಖ್ಯಸ್ಥರು ಆಗಿದ್ದು, ಸ್ವತ ಅಂದಿನ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು ಎಂದರು.