ಬೆಂಗಳೂರು: ಅಂಬಿಕಾಪತಿ ಕಾಂಗ್ರೆಸ್ ಪಾರ್ಟಿನಾ?. ಅವರು ಜೆಡಿಎಸ್ ನವರು ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಐಟಿ ರೇಡ್ ಬಗ್ಗೆ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರು ಐಟಿ ರೇಡ್ ಮಾಡಿಸಿಕೊಂಡಿದ್ದಾರೋ ಅವರದ್ದೇ ದುಡ್ಡು ಅಂತ ನಿಮಗೂ ಗೊತ್ತು. ಅವರು ದುಡ್ಡು ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷವು ಇದು ಬಿಜೆಪಿ ದುಡ್ಡು, ಜೆಡಿಎಸ್ ದುಡ್ಡು ಎಂದು ಹೇಳ್ತಿಲ್ಲ. ಕಾಂಟ್ರಾಕ್ಟರ್ಸ್ ಬಳಿ ಹಣ ಸಿಕ್ಕಿದೆ, ಅದಕ್ಕೆ ಅವರು ಉತ್ತರ ಕೊಡ್ತಾರೆ ಎಂದರು.