ಕರ್ತವ್ಯದ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಂತ್ಯಕ್ರಿಯೆಯಲ್ಲಿ ಮಿಲಿಟರಿ ಗೌರವ ಇಲ್ಲ: ಭಾರತೀಯ ಸೇನೆ

Prasthutha|

- Advertisement -

ನವದೆಹಲಿ: ಕರ್ತವ್ಯದ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಂತ್ಯಕ್ರಿಯೆ ವೇಳೆ ಮಿಲಿಟರಿ ನಿಯಮಗಳ ಪ್ರಕಾರ ಗೌರವ ನೀಡುವುದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ

ಅಗ್ನಿವೀರ್ ಅಮೃತಪಾಲ್ ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೇನಾ ವಕ್ತಾರರು, ಅಗ್ನಿವೀರ್ ಎನ್ನುವ ಕಾರಣಕ್ಕೆ ಸೇನಾ ಗೌರವ ನೀಡಿಲ್ಲ ಎನ್ನುವ ಆರೋಪ ಸರಿಯಲ್ಲ. ಸ್ವಯಂ ಕಾರಣಗಳಿಂದ ಆಗುವ ಸಾವುಗಳಿಗೆ ಸೇನಾ ಗೌರವ ಸಿಗುವುದಿಲ್ಲ. ಇದನ್ನು ನಿಯಮಗಳೇ ಉಲ್ಲೇಖಿಸಿದೆ ಎಂದು ಸ್ಪಷ್ಟಪಡಿಸಿದರು.