ಭೌತಶಾಸ್ತ್ರದ ನೊಬೆಲ್: ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ

Prasthutha|

ಸ್ಟಾಕ್ ಹೋಮ್ (ಸ್ವೀಡನ್) : ಭೌತಶಾಸ್ತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಈ ವರ್ಷ ಮೂವರಿಗೆ ನೀಡಲಾಗಿದೆ.

- Advertisement -


ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಭೌತಶಾಸ್ತ್ರದ ಪ್ರಶಸ್ತಿ ಘೋಷಿಸಿದ್ದು, ಅಮೆರಿಕದ ಪೆರ್ರಿ ಅಗೋಸ್ಟಿನಿ, ಜರ್ಮನಿಯ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್ ನ ಅನ್ನೆ ಎಲ್.ಹ್ಯೂಲಿಯರ್ ಅವರನ್ನು 2023ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಹೆಸರಿಸಲಾಗಿದೆ.


ಪೆರ್ರಿ ಅಗೋಸ್ಟಿನಿ ಅಮೆರಿಕದ ಕೊಲಂಬಸ್ ನ ದಿ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದರೆ, ಫೆರೆಂಕ್ ಕ್ರೌಸ್ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ ಸ್ಟಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇನ್ನೊಬ್ಬ ವಿಜ್ಞಾನಿಯಾದ ಅನ್ನೆ ಹ್ಯೂಲಿಯರ್ ಅವರು ಸ್ವೀಡನ್ ಲುಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದಾರೆ.



Join Whatsapp