ಬಿಜೆಪಿ-ಜೆಡಿಎಸ್ ಮೈತ್ರಿ ಅನೈತಿಕ ಸಂಬಂಧ: ಮುನಿಯಪ್ಪ

Prasthutha|

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಅನೈತಿಕ ಸಂಬಂಧ. ಬಿಜೆಪಿ-ಜೆಡಿಎಸ್ ಎಷ್ಟೇ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ 20+ ಸೀಟು ಗೆಲ್ಲುತ್ತದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

- Advertisement -


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿಯಿಂದ ಅಸಮಾಧಾನವಾಗಿ ಜೆಡಿಎಸ್ ನಿಂದ ಅನೇಕ ಜನ ಕಾಂಗ್ರೆಸ್ ಗೆ ಬರುತ್ತಿದ್ದಾರೆ. ದೇವೇಗೌಡರು ಜಾತ್ಯತೀತ ನಿಲುವಿನಿಂದ ಈಗ ಆಚೆ ಬಂದಿದ್ದಾರೆ. ಹೀಗಾಗಿ ಅನೇಕರು ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಇದೊಂದು ಅನೈತಿಕ ಸಂಬಂಧ ಆಗುತ್ತಿದೆ ಎಂದು ಕಿಡಿಕಾರಿದರು.


ಕುಮಾರಸ್ವಾಮಿ ತುಂಬಾ ಮುಂದೆ ಹೋಗುತ್ತಿದ್ದಾರೆ. ಜಾತ್ಯತೀತವಾಗಿ ನಡೆದುಕೊಂಡು ಬಂದ ಮೇಲೆ ಹಾಗೇ ಇರಬೇಕು. ಆದರೆ ಅವರು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಆದರೂ ಅದು ಅವರ ಪಕ್ಷದ ನಿರ್ಧಾರ. ಆದರೆ ಜಾತ್ಯತೀತ ನಿಲುವು ಇರೋ ಕಾರ್ಯಕರ್ತರು, ನಾಯಕರು ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಇನ್ನೂ ಬರುತ್ತಾರೆ ಎಂದು ತಿಳಿಸಿದರು.