ಉಹಾಪೂಹಾಗಳಿಗೆ ಕಿವಿ ಕೊಡದೆ ನಗರದಲ್ಲಿ ಶಾಂತಿ ಕಾಪಾಡಿ: ಶಿವಮೊಗ್ಗ SDPI ಜಿಲ್ಲಾಧ್ಯಕ್ಷ ಇಮ್ರಾನ್ ಮನವಿ

Prasthutha|

ಶಿವಮೊಗ್ಗ: ಉಹಾಪೂಹಾಗಳಿಗೆ ಕಿವಿ ಕೊಡದೆ ನಗರದಲ್ಲಿ ಶಾಂತಿ ಕಾಪಾಡಿ, ಸಮಸ್ಯೆ ಇದ್ದರೆ ಪೊಲೀಸರಿಗೆ ದೂರು ನೀಡಿ. ಕೆಲ ಮಾಧ್ಯಮಗಳಲ್ಲಿ  ರಾಜಕೀಯ ಲಾಭಕ್ಕಾಗಿ ಕೆಲ ರಾಜಕಾರಣಿಗಳು ಪ್ರಚೋದನೆ ನೀಡುತ್ತಿದ್ದಾರೆ ಈ ಪ್ರಚೋದನೆಗಳಿಗೆ ಒಳಗಾಗದೆ ಪ್ರಜ್ಞೆವಂತ ನಾಗರೀಕ ಸಮಾಜ ಶಾಂತಿ ಕಾಪಾಡಲು ಪ್ರಯತ್ನಿಸಬೇಕೆಂದು SDPI ಜಿಲ್ಲಾಧ್ಯಕ್ಷರಾದ ಇಮ್ರಾನ್ ಮನವಿ ಮಾಡಿದ್ದಾರೆ.

- Advertisement -

  ಈದ್ ಮಿಲಾದ್ ಹಬ್ಬದ ಜುಲೂಸ್ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಶಾಂತಿ ನಗರದಲ್ಲಿ ಕಲ್ಲು ತೂರಾಟ ನಡೆದಿದ್ದು ಉದ್ವಿಗ್ನ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ. ನಂತರ ಪೊಲೀಸ್ ಇಲಾಖೆ ಹಗಲು ರಾತ್ರಿ ಎನ್ನದೆ ಬಹಳಷ್ಟು ಶ್ರಮ ಪಟ್ಟು ಶಾಂತಿ ನಗರದಲ್ಲಿ ಶಾಂತಿ ತರಲು ಯಶಸ್ವಿಯಾಗಿದ್ದಾರೆ. ಈದ್ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅಶಾಂತಿ ಉಂಟು ಮಾಡುವ ಪೂರ್ವ ನಿಯೋಜನೆ ಮಾಡಿಕೊಂಡಿದ್ದರು ಅದರ ಭಾಗವಾಗಿ ಜುಲೂಸ್ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ ಎಂಬ ಶಂಕೆ ಜನರಲ್ಲಿ ಉಂಟಾಗಿದೆ. ಕಲ್ಲು ಶೇಖರಣೆ ಮಾಡಿಕೊಂಡು ಶಾಂತಿ ರೀತಿಯಲ್ಲಿ ಹೋಗುವ ಈದೊ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡುವ ಹಿಂದೆ ಯಾರಿದ್ದಾರೆ ಎಂದು ನಿಷ್ಪಕ್ಷಪಾತ ತನಿಖೆ ಆಗಬೇಕು. ಮಾಧ್ಯಮಗಳಲ್ಲಿ ಶಿವಮೊಗ್ಗ ನಗರದಲ್ಲಿ ಗಲಭೆ ನಡೆದಿದೆ ಎಂದು ಸುದ್ದಿ ಮಾಡಲಾಗುತ್ತಿದೆ ಹಾಗೂ ಟಿವಿ ಚಾನೆಲ್ ಚರ್ಚೆಗಳಲ್ಲಿ ಪ್ರಚೋದನೆ ಮಾಡುವವರನ್ನು ಕಥೆ ಕಟ್ಟುವವರನ್ನ ಕರೆಸಿ ಭಯದ ವಾತಾವರಣ ನಿರ್ಮಾಣವಾಗಿದೆ ಈ ಅವಕಾಶವನ್ನು ಉಪಯೋಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಖಂಡನೀಯ.

 ಶಿವಮೊಗ್ಗ ಜಿಲ್ಲೆಯ ರಕ್ಷಣಾಧಿಕಾರಿಗಳಾದ ಮಿಥುನ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ “ಶಿವಮೊಗ್ಗ ಧಗಧಗ ಏನು ಇಲ್ಲ ಶಾಂತವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ಮಾಜಿ ಶಾಸಕರಾದ ಈಶ್ವರಪ್ಪ”ತಲ್ವಾರ್ ಹಿಡಿಯಲು ಹಿಂದೂ ಸಮಾಜಕ್ಕೂ ಬರುತ್ತೆ” ಎಂದು ಮಾಧ್ಯಮಗಳಲ್ಲಿ ಪ್ರಚೋದನೆ ನೀಡುತ್ತಿದ್ದಾರೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯರಾಗಿರುವ ಮಾಜಿ ಸಚಿವ ಈಶ್ವರಪ್ಪನವರು ಶಾಂತಿ ಕಾಪಾಡಲು ನಾಗರಿಕರಲ್ಲಿ ಮನವಿ ಮಾಡುವ ಬದಲು ಪ್ರಚೋದನೆ ನೀಡುತ್ತಿರುವುದು ಖಂಡನೀಯ,  ಇಂತಹ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ, ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಶಿವಮೊಗ್ಗ ಜಿಲ್ಲಾ ಸಮಿತಿ ಮನವಿ ಮಾಡುತ್ತದೆ.