►ಬಿಜೆಪಿ, ಜೆಡಿಎಸ್ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ
ಶಿವಮೊಗ್ಗ: ಬಿಜೆಪಿ ಚುನಾವಣೆಯಲ್ಲಿ ಸೋತ ಬಳಿಕ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಂದು ಸೊರಬಾ ತಾಲೂಕಿನ ತಲಗಡ್ಡೆಯಲ್ಲಿ ಘನತ್ಯಾಜ್ಯ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾವು ಚುನಾವಣೆಗೆ ಮುನ್ನ ಹೇಳಿರುವ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ಮೊದಲಿಗೆ ಅವಸರ ಮಾಡಿದ್ದಿರಿ. ಎಲ್ಲರಿಗೂ ಕೊಡಿ ಎಂದರು. ಈಗ ಒಂದೊಂದು ಯೋಜನೆ ಜಾರಿಯಾಗುವ ವೇಳೆ ದುಡ್ಡು ಎಲ್ಲಿಂದ ತರುತ್ತಿರಿ ಎನ್ನುತ್ತಿದ್ದಾರೆ. ದುಡ್ಡು ತರುವುದು ನಮ್ಮ ಕೆಲಸ. ಅವರು ಸೋತಿದ್ದಾರೆ, ನಮ್ಮ ಆಡಳಿತ ನೋಡಿಕೊಂಡು ಹೋಗಬೇಕು ಎಂದರು.
ಸರ್ಕಾರದ ಯೋಜನೆಗಳ ಉಪಯೋಗವನ್ನು ಜನತೆ ಮಾಡಿಕೊಳ್ಳಬೇಕು. ಈಗ ಮನೆ ಕಟ್ಟಸಿಕೊಳ್ಳುವುದು ಕಷ್ಟ. ಆ ಮನೆಗೆ ಬೆಳಕು ಬೇಕು. ಅಂತಹ ಕಾರ್ಯಕ್ರಮ ನಾವು ನೀಡಿದ್ದೇವೆ. ಉಚಿತ ಬಸ್ ಸಂಚಾರ ಆರಂಭ ಆಗಿದೆ. ಬಸ್ ಕೊರತೆ ಇದೆ. ಈಗಾಗಲೇ ಹೊಸ ಬಸ್ ಕೂಡ ಬರುತ್ತವೆ. ಅದರಲ್ಲಿ ನಮ್ಮ ಜಿಲ್ಲೆಗೆ 100 ಬಸ್ ಬರುತ್ತವೆ. ಮಕ್ಕಳು ಶಾಲೆಗೆ ತೆರಳಲು ಕೂಡ ಬಸ್ ಬೇಕು. ಮೊದಲು ನನ್ನ ಸ್ವಕ್ಷೇತ್ರ ಸೊರಬದಲ್ಲಿ ಮಾತ್ರ ಇರುತ್ತಿದ್ದೆ. ಈಗ ಜಿಲ್ಲೆಯ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ಜನರು ನಮ್ಮ ಮುಖಂಡರ ಮೂಲಕ ಕೆಲಸಗಳನ್ನು ನನ್ನ ಗಮನಕ್ಕೆ ತನ್ನಿ ನಿಮ್ಮ ಸೇವೆಗೆ ನಾನು ಇದ್ದೇನೆ ಎಂದರು.