ಕ್ರಾಂತಿಕಾರಿ ಗಾಯಕ ‘ಗದ್ದರ್’ ಇನ್ನಿಲ್ಲ

Prasthutha|

ಹೈದರಾಬಾದ್: ತೆಲುಗಿನ ಖ್ಯಾತ ಕ್ರಾಂತಿಕಾರಿ ಗಾಯಕ, ‘ಗದ್ದರ್’ ಎಂದೇ ಪ್ರಸಿದ್ಧರಾದ ಗುಮ್ಮಡಿ ವಿಠ್ಠಲ್ ರಾವ್ ಇಂದು ನಿಧನರಾಗಿದ್ದಾರೆ.

- Advertisement -

ಕೆಲವು ಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಗದ್ದರ್, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದಾರೆ.

ಗದ್ದರ್ ಹಾಡಲು ಶುರುವಿಟ್ಟರೆ ನೆರೆದವರಲ್ಲಿ ಶೋಷಣೆಯ ವಿರುದ್ಧ ಸಿಟ್ಟು ಸ್ಫೋಟಗೊಳ್ಳುತ್ತಿತ್ತು. ಇದೇ ಕಾರಣಕ್ಕೆ ಗದ್ದರ್ ಪೊಲೀಸರ ಟಾರ್ಗೆಟ್ ಆದರು. ಹಲವು ಬಾರಿ ಪೊಲೀಸರ ದಾಳಿಯಿಂದ ಗದ್ದರ್ ಸ್ವಲ್ಪದರಲ್ಲಿ ಪಾರಾಗಿದ್ದರು.