ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ: ಅಪ್ರಾಪ್ತ ಸೇರಿ ಇಬ್ಬರ ಬಂಧನ

Prasthutha|

ಹೊಸದಿಲ್ಲಿ: ಕೋವಿನ್ (CoWIN) ಪೋರ್ಟಲ್‌ನಿಂದ ಡೇಟಾ ಸೋರಿಕೆ ಆರೋಪದ ಮೇಲೆ ಬಿಹಾರ ಮೂಲದ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

- Advertisement -

ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಸಂಬಂಧಿಸಿದ ಮಾಹಿತಿಗಳು ಕೋವಿನ್ ಪೋರ್ಟಲ್‌ನಲ್ಲಿ ಸೋರಿಕೆಯಾಗಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಜನರ ಡೇಟಾ ಸೋರಿಕೆಯನ್ನು ಟೆಲಿಗ್ರಾಂ ಆ್ಯಪ್ ಬಳಸಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾದ ನಾಗರಿಕರ ಡೇಟಾ ಸೋರಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಕೇಳಿಕೊಂಡಿವೆ. ಆದರೆ ಸರ್ಕಾರ ಕೋವಿನ್ ಪೋರ್ಟಲ್‌ನಲ್ಲಿ ಡೇಟಾ ಗೌಪ್ಯತೆಗೆ ಸಾಕಷ್ಟು ಸುರಕ್ಷತೆಯಿದ್ದು, ಅಂತಹ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿತ್ತು.

- Advertisement -

ಈ ವಿಷಯವನ್ನು ದೇಶದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಇನ್ ಪರಿಶೀಲನೆಗೆ ಕಳುಹಿಸಿದ್ದು, ಅದು ತನ್ನ ಆರಂಭಿಕ ವರದಿಯಲ್ಲಿ ಡೇಟಾ ಸೋರಿಕೆ ಟೆಲಿಗ್ರಾಂ ಆ್ಯಪ್ ಮೂಲಕ ಮಾಡಲಾಗಿದೆ ಎಂಬುದನ್ನು ತಿಳಿಸಿದೆ. ಇದೀಗ ಕೋವಿನ್ ಡೇಟಾ ಲೀಕ್ ಆರೋಪದ ಮೇಲೆ ಬಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.



Join Whatsapp