ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

Prasthutha|

ಮಂಡ್ಯ: 40 ಸಾವಿರ ಲಂಚ ಪಡೆಯುವ ವೇಳೆ ತಹಶಿಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

- Advertisement -

ಸದ್ಯ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್​ ಸೌಮ್ಯಾರನ್ನು ಬಂಧಿಸಲಾಗಿದೆ. ಗ್ರಾಮಲೆಕ್ಕಿಗ ಮರಿಸ್ವಾಮಿ ಎನ್ನುವವರನ್ನು ಗುಮ್ಮನಹಳ್ಳಿಯಿಂದ ದೊಡ್ಡ ಮೊಮ್ಮನ ಹಳ್ಳಿಗೆ ವರ್ಗಾವಣೆ ಮಾಡಲು ಕಚೇರಿಯಲ್ಲಿ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಇನ್ಸ್​ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ.