ಗುಜರಾತ್ | ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ರ್ಯಾಲಿ ವೇಳೆ ಘರ್ಷಣೆ; 40 ಮಂದಿ ಬಂಧನ

Prasthutha|

ನವದೆಹಲಿ : ಗುಜರಾತ್ ನ ಕಚ್ ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟು, ಪೊಲೀಸರು ಸಹಿತ ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ 40 ಮಂದಿಯನ್ನು ಬಂಧಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ಗಲಭೆ ಸಂಭವಿಸಿದೆ.

- Advertisement -

ಪರಿಸ್ಥಿತಿ ನಿಭಾಯಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರ್ಯಾಲಿ ಬಳಿಕ ರ್ವ ವಲಸಿಗ ಕಾರ್ಮಿಕನೊಬ್ಬನ ಶವ ಪತ್ತೆಯಾಗಿದೆ. ಗಲಭೆಗೆ ಸಂಬಂಧಿಸಿ ಆತನ ಹತ್ಯೆಯಾಗಿದೆಯೇ? ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರ್ಯಾಲಿ ನಡೆಸಲು ಗುಂಪಿಗೆ ಅನುಮತಿಯಿರಲಿಲ್ಲ ಎನ್ನಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಇದೇ ರೀತಿಯ ರ್ಯಾಲಿಗಳಲ್ಲಿ ಮಧ್ಯಪ್ರದೇಶ ಸೇರಿದಂತೆ ವಿವಿಧೆಡೆಗಳಲ್ಲಿ ಗಲಭೆಗಳು ನಡೆದಿವೆ.



Join Whatsapp