ಬಿಜೆಪಿ ಮಾವೊವಾದಿಗಳಿಗಿಂತಲೂ ಅಪಾಯಕಾರಿ : ಮಮತಾ ಬ್ಯಾನರ್ಜಿ

Prasthutha|

ಕೊಲ್ಕತಾ : ಬಿಜೆಪಿ ಮಾವೊವಾದಿಗಳಿಗಿಂತ ಅಪಾಯಕಾರಿ ಪಕ್ಷ ಎಂದು ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

- Advertisement -

ಬಿಜೆಪಿ ಮಾವೊವಾದಿಗಳಿಗಿಂತಲೂ ಅಪಾಯಕಾರಿ ಪಕ್ಷ. ಯಾರ್ಯಾರು ನಮ್ಮನ್ನು ಬಿಟ್ಟು ಅಲ್ಲಿಗೆ ಹೋಗಲು ಬಯಸುತ್ತೀರೋ ಅವರು ಹೋಗಬಹುದು. ಆದರೆ, ನಾವು ಎಂದಿಗೂ ಅವರಿಗೆ ತಲೆಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪುರುವಾಲಿಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಬಿಜೆಪಿ ಬರೀ ಸುಳ್ಳು ಹೇಳುತ್ತದೆ. ಚುನಾವಣೆ ಸಮಯದಲ್ಲಿ ಸುಳ್ಳಿನ ಸರಮಾಲೆಯನ್ನೇ ಹೆಣೆದು ಚುನಾವಣೆಯ ನಂತರ ಮಾಯವಾಗಿ ಬಿಡುತ್ತಾರೆ ಎಂದು ಮಮತಾ ತಿಳಿಸಿದ್ದಾರೆ.

- Advertisement -

ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿರುವುದರಿಂದ, ಇದೀಗ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಹಲವು ಮುಖಂಡರು ಟಿಎಂಸಿಯಿಂದ ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ವರದಿಗಳು ಇತ್ತೀಚೆಗೆ ಕೇಳಿಬರುತ್ತಿವೆ.

Join Whatsapp