ದೇಶವನ್ನು ತಲೆತಗ್ಗಿಸಲು ಬಿಡುವುದಿಲ್ಲ ಎಂದಿದ್ದ ಮೋದಿಗೆ ರಾಹುಲ್ ಟಾಂಗ್ | ‘ಚೀನಾ ಗ್ರಾಮ’ಕ್ಕೆ ಆಕ್ರೋಶ

Prasthutha|

- Advertisement -

ಭಾರತದ ಗಡಿಯಲ್ಲಿ ಚೀನಾ ಗ್ರಾಮವನ್ನು ನಿರ್ಮಿಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ದೇಶವನ್ನು ತಲೆತಗ್ಗಿಸಲು ಬಿಡುವುದಿಲ್ಲವೆಂದು ಅವರು ಭರವಸೆ ನೀಡಿದ್ದರು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಮೋದೀಜಿಯ 56 ಇಂಚಿನ ಎದೆ ಎಲ್ಲಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಕೇಳಿದ್ದಾರೆ. ವಿವಾದಿತ ಭೂಮಿಯಲ್ಲಿ ಚೀನಾ ಗ್ರಾಮವನ್ನು ಸ್ಥಾಪಿಸಿದೆ ಎಂದು ಬಿಜೆಪಿ ಸಂಸದ ತಪೀರ್ ಗಾವೊ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಸ್ಪಂದಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

ಅರುಣಾಚಲ ಪ್ರದೇಶದ ಸುಬಾನ್ ಸಿರಿ ಜಿಲ್ಲೆಯ ತಿಸಾರಿ ಚು ನದಿಯ ದಡದಲ್ಲಿ ಚೀನಾ ಗ್ರಾಮವನ್ನು ನಿರ್ಮಿಸುತ್ತಿದೆ. ಇದರ ಉಪಗ್ರಹ ಚಿತ್ರಗಳನ್ನು ಎನ್‌ಡಿಟಿವಿ ಬಿಡುಗಡೆ ಮಾಡಿದೆ. ಉಪಗ್ರಹ ಚಿತ್ರದಲ್ಲಿ 2019 ರ ಆಗಸ್ಟ್ ನಲ್ಲಿ ಯಾವುದೇ ನಿರ್ಮಾಣ ನಡೆಯದ ಪ್ರದೇಶವು 2020 ರ ವೇಳೆಗೆ ಮನೆಗಳು ತುಂಬಿದ ಗ್ರಾಮವಾಗಿ ಕಾಣುತ್ತಿದೆ. ಕಳೆದ ವರ್ಷ ಕೊರೋನಾ ಸಮಯದಲ್ಲೇ ಇದರ ನಿರ್ಮಾಣ ಪ್ರಾರಂಭವಾಗಿತ್ತು.

- Advertisement -

ಅರುಣಾಚಲ ಪ್ರದೇಶವನ್ನು ಚೀನಾ ಆಕ್ರಮಿಸಿದೆ ಎಂದು ಬಿಜೆಪಿ ಸಂಸದ ತಪೀರ್ ಗಾವೊ ವಿವರಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯವು ಈ ಬಗ್ಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷ ಪೂರ್ವ ಲಡಾಕ್‌ನಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

Join Whatsapp