ಪ್ರತಾಪ್ ಗಢ: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್ ಹತ್ಯೆ ಆರೋಪದಲ್ಲಿ ಜೈಲು ಪಾಲಾಗಿರುವ ಲವ್ಲೀಶ್ ತಿವಾರಿ ಜೈಲಿನಲ್ಲಿದ್ದರೂ ಆತನ ಸಾಮಾಜಿಕ ಜಾಲತಾಣಗಳ ಖಾತೆಗಳು ಸಕ್ರಿಯವಾಗಿದೆ.
ಪ್ರಯಾಗರಾಜ್ ನಲ್ಲಿ ಏಪ್ರಿಲ್ 15 ರಂದು ಅತೀಕ್ ಅಹ್ಮದ್ ಹಾಗೂ ಆಶ್ರಫ್ ರನ್ನು ಲವ್ಲೀಶ್ ಹಾಗೂ ಆತನ ಇತರ ಇಬ್ಬರು ಸ್ನೇಹಿತರು ಮಾಧ್ಯಮದ ಎದುರೇ ಶೂಟ್ ಮಾಡಿ ಸಾಯಿಸಿದ್ದರು. ಏಪ್ರಿಲ್ 19 ರಂದು ಆರೋಪಿಗಳ ಬಂಧನವಾಗಿತ್ತು.
ಲವ್ಲೀಶ್ ತಿವಾರಿಯ ಮಹಾರಾಜ ಲವ್ಲಿಶ್ ತಿವಾರಿ ಚುಚು ಎಂಬ ಸಾಮಾಜಿಕ ತಾಣಗಳ ಖಾತೆಗಳಿಂದ ನಿತ್ಯ ಅನೇಕ ಪೋಸ್ಟ್ ಗಳು ಪ್ರಕಟವಾಗುತ್ತಿರುವುದನ್ನು ಬಂಡಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಲವ್ಲೀಶ್ ತಿವಾರಿ ಅಕೌಂಟ್ ಗಳನ್ನು ಯಾರು ಬಳಸುತ್ತಿದ್ದಾರೆ ಎಂಬುದನ್ನು ಶೀಘ್ರವೇ ಪತ್ತೆ ಹಚ್ಚಿ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ತಿಳಿಸಿದ್ದಾರೆ.