‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ರಿಲೀಸ್: ಜಗ್ಗೇಶ್ ಮುಖಕ್ಕೆ ಬಿಳಿಪಟ್ಟೆ

Prasthutha|

ಬೆಂಗಳೂರು: ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾ ಪೊಸ್ಟರ್ ನಲ್ಲಿ ಜಗ್ಗೇಶ್ ಮುಖವನ್ನು ಮರೆಮಾಚಲಾಗಿದೆ.

- Advertisement -


ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇಂದು ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣಾ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದಾರೆ. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು. ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದಾರೆ.


ಹಾಗಾಗಿ ಚಿತ್ರ ಪ್ರದರ್ಶನಕ್ಕೆ ನಂತರ ಅನುವು ಮಾಡಿಕೊಡಲಾಗಿದೆ.