ಕಾಂಗ್ರೆಸ್’ನ 24 ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ

Prasthutha|

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿದ್ದರೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದೇ ಬಂಡಾಯವೆದ್ದಿರುವ 24 ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

- Advertisement -


ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಬಂಡಾಯವೆದ್ದ 24 ಮುಖಂಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ 6 ವರ್ಷ ಅಮಾನತು ಮಾಡಿ ಕರ್ನಾಟಕ ಕಾಂಗ್ರೆಸ್ ಪ್ರದೇಶ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.


ಉಚ್ಛಾಟನೆಗೊಂಡ ಬಂಡಾಯ ಅಭ್ಯರ್ಥಿಗಳ ಪಟ್ಟಿ ಇಂತಿದೆ

 1. ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ- ಮಾಜಿ ಶಾಸಕ
 2. ಕುಣಿಗಲ್ – ಬಿ.ಬಿ. ರಾಮಸ್ವಾಮಿಗೌಡ- ಮಾಜಿ ಶಾಸಕ
 3. ಜಗಳೂರು- ಹೆಚ್.ಪಿ. ರಾಜೇಶ್- ಮಾಜಿ ಶಾಸಕ
 4. ಹರಪನಹಳ್ಳಿ- ಎಂ.ಪಿ. ಲತಾ ಮಲ್ಲಿಕಾರ್ಜುನ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
 5. ಅರಕಲಗೂಡು- ಕೃಷ್ನೇಗೌಡ
 6. ಬೀದರ್ ದಕ್ಷಿಣ – ಚಂದ್ರಾ ಸಿಂಗ್- ಕೆಪಿಸಿಸಿ- ಸಂಯೋಜಕ
 7. ತರೀಕೆರೆ- ಗೋಪಿಕೃಷ್ಣ- ಡಿಸಿಸಿ- ಉಪಾಧ್ಯಕ್ಷ
 8. ಖಾನಾಪುರ- ಇರ್ಫಾನ್ ತಾಳಿಕೋಟೆ- ಬೆಳಗಾವಿ ಮಾಜಿ ಯುವ ಕಾಂಗ್ರೆಸ್ ಮುಖಂಡ
 9. ತೇರದಾಳ- ಡಾ. ಪದ್ಮಜೀತ್ ನಾಡಗೌಡ- ಕಿಸಾಬ್ ಸೆಲ್- ಉಪಾಧ್ಯಕ್ಷ
 10. ಹು-ಧಾರವಾಡ ಪಶ್ಚಿಮ- ಬಸವರಾಜ್ ಮಲ್ಕಾರಿ- ಮಾಜಿ ಬ್ಲಾಕ್ ಅಧ್ಯಕ್ಷ
 11. ನೆಲಮಂಗಲ- ಉಮಾದೇವಿ- ಲೇಬರ್ ಸೆಲ್ ಉಪಾಧ್ಯಕ್ಷೆ
 12. ಬೀದರ್ ದಕ್ಷಿಣ- ಯೂಸುಫ್ ಅಲೀ ಜಮ್ದಾರ್- ಡಿಸಿಸಿ ಉಪಾಧ್ಯಕ್ಷ ಬೀದರ್
 13. ಬೀದರ್ ದಕ್ಷಿಣ – ನಾರಾಯಣ್ ಬಂಗಿ- ಎಸ್ಟಿ ಸೆಲ್ ಅಧ್ಯಕ್ಷ ಬೀದರ್
 14. ಮಾಯಕೊಂಡ- ಸವಿತಾ ಮಲ್ಲೇಶ್ನಾಯಕ್- ಟಿಕೆಟ್ ಆಕಾಂಕ್ಷಿ
 15. ಶ್ರೀರಂಗಪಟ್ಟಣ- ಪಿ.ಎಚ್. ಚಂದ್ರಶೇಖರ್- ಟಿಕೆಟ್ ಆಕಾಂಕ್ಷಿ
 16. ಶಿಡ್ಲಘಟ್ಟ- ಪಿಟ್ಟು ಆಂಜನಪ್ಪ- ಟಿಕೆಟ್ ಆಕಾಂಕ್ಷಿ
 17. ರಾಯಭಾಗ್- ಶಂಭು ಕೋಲ್ಕರ್- ಟಿಕೆಟ್ ಆಕಾಂಕ್ಷಿ
 18. ಶಿವಮೊಗ್ಗ ಗ್ರಾಮಾಂತರ- ಬಿ.ಎಚ್. ಭೀಮಪ್ಪ- ಟಿಕೆಟ್ ಆಕಾಂಕ್ಷಿ
 19. ಶಿಕಾರಿಪುರ- ಎಸ್ಪಿ. ನಾಗರಾಜಗೌಡ- ಟಿಕೆಟ್ ಆಕಾಂಕ್ಷಿ
 20. ತರೀಕೆರೆ- ದೋರ್ನಲ್ ಪರಮೇಶ್ವರಪ್ಪ- ಟಿಕೆಟ್ ಆಕಾಂಕ್ಷಿ
 21. ಬೀದರ್- ಶಶಿ ಚೌದಿ- ಟಿಕೆಟ್ ಆಕಾಂಕ್ಷಿ
 22. ಔರಾದ್- ಲಕ್ಷ್ಮಣ್ ಸೊರಳಿ- ಟಿಕೆಟ್ ಆಕಾಂಕ್ಷಿ
 23. ರಾಯಚೂರು ನಗರ- ಮಜೀಬುದ್ದೀನ್- ಟಿಕೆಟ್ ಆಕಾಂಕ್ಷಿ
 24. ಬೀದರ್ ದಕ್ಷಿಣ- ವಿಜಯಕುಮಾರ್ ಬರೂರ್.