ಬಿಜೆಪಿಯಲ್ಲಿ  ಮಹಿಳೆಯರಿಗೆ ಗೌರವವಿಲ್ಲ: ಬಿ.ಕೆ ಹರಿಪ್ರಸಾದ್

Prasthutha|

ಬೆಂಗಳೂರು: ಬಿಜೆಪಿಗರಿಗೆ ಮಹಿಳೆಯರ ಮೇಲೆ ಕಿಂಚಿತ್ತೂ ಗೌರವವಿಲ್ಲ. ಆಚಾರವಿಲ್ಲದ ನಾಲಿಗೆ ನೀಚ ಗುಣವನ್ನೇ ಎತ್ತಿ ತೋರಿಸುತ್ತಿದೆ. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲಿನ ಗೌರವ ಎಷ್ಟಿದೆ ಎಂಬುವುದಕ್ಕೆ ಯತ್ನಾಳ್ ಹೇಳಿಕೆ ಕೈಗನ್ನಡಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯತ್ನಾಳ್ ಹೇಳಿಕೆ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ. ಮಾತೆ,ಸಂಸ್ಕೃತಿ ಎಂದು ಬೊಗಳೆ ಭಾಷಣ ಮಾಡುವ ಬಿಜೆಪಿ ನಾಯಕರು ಕೂಡಲೇ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಛಾಟಿಸಿ,ಮಹಿಳಾ ಸಮುದಾಯಕ್ಕೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.



Join Whatsapp