ನಮಾಝ್ ನಿರ್ವಹಿಸಿದ 1,700 ಮುಸ್ಲಿಂ ಮುಖಂಡರ ಮೇಲೆ ಬಿತ್ತು ಕೇಸ್‌

Prasthutha|

ಲಕ್ನೋ: ಈದ್- ಉಲ್-ಫಿತ್ ಅಂಗವಾಗಿ ನಮಾಝ್ ಮಾಡಿದ 1,700 ಮಂದಿ ಮುಖಂಡರ ವಿರುದ್ಧ ಕೇಸ್ ದಾಖಲಾಗಿದೆ.

- Advertisement -

ಏಪ್ರಿಲ್‌ 22ರಂದು ಉತ್ತರ ಪ್ರದೇಶದ ಬೆನಜಬಾರ್‌ ನಲ್ಲಿರುವ ಜಜ್ಮೌ ಈದ್ಗಾ, ಬಾಬುಪುರ್ವಾ ಈದ್ಗಾ ಮತ್ತು ಬದಿ ಈದ್ಗಾದ ಹೊರಭಾಗದ ರಸ್ತೆಯಲ್ಲಿ ನಮಾಜ್ ಮಾಡಲಾಗಿತ್ತು. ಹಾಗಾಗಿ ಜಜ್ಮೌ ಪೊಲೀಸ್ ಠಾಣೆಯಲ್ಲಿ 200, ಬೇಗಂಪುರವಾ ಪೊಲೀಸ್ ಠಾಣೆಯಲ್ಲಿ 40 ರಿಂದ 50 ಹಾಗೂ ಬೆನಜ್‌ ಹಬರ್‌ ಪೊಲೀಸ್ ಠಾಣೆಯಲ್ಲಿ ಸುಮಾರು 1,500 ಮಂದಿ ವಿರುದ್ಧ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp