ಅತೀಕ್ ಅಹ್ಮದ್ ಹತ್ಯೆ: ಯೋಗಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ- ಎಸ್’ಡಿಪಿಐ ಒತ್ತಾಯ

Prasthutha|

ಬೆಂಗಳೂರು: ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರನನ್ನು ಪೊಲೀಸರ ಸಮ್ಮುಖದಲ್ಲೇ ಗುಂಡಿಟ್ಟುಕೊಂದ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಎಸ್’ಡಿಪಿಐ, ಜಂಗಲ್ ರಾಜ್ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತಕ್ಷಣ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡುವಂತೆ ಆಗ್ರಹಿಸಿದೆ.

- Advertisement -


ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಹತ್ಯೆ ಪೊಲೀಸರ ಸಮ್ಮುಖದಲ್ಲಿ ನಡೆದ ಅಘಾತಕಾರಿ ಘಟನೆಯಾಗಿದ್ದು, ಇದು ಖಂಡನೀಯ. ನರೇಂದ್ರ ಮೋದಿ ಈ ಬಗ್ಗೆ ಮೌನ ಮುರಿಯಲಿ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.


ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟ್ವೀಟ್ ಮಾಡಿ, ಯೋಗಿ ರಾಜ್ಯದಲ್ಲಿ “ಜೈ ಶ್ರೀ ರಾಮ್”ಘೋಷಣೆಗಳೊಂದಿಗೆ ಸಂಘೀ ಭಯೋತ್ಪಾದಕರು ಮಾಜಿ ಸಂಸದ ಅತಿಕ್ ಮತ್ತು ಅವರ ಸಹೋದರನನ್ನು ಪೊಲೀಸರ ಮುಂದೆಯೇ ಗುಂಡಿಕ್ಕಿ ಕೊಂದರು ಸಹ ಪೊಲೀಸರು ರಕ್ಷಣೆಗಾಗಿ ಒಂದೇ ಒಂದು ಗುಂಡು ಹಾರಿಸಲಿಲ್ಲ! ಎಂಥಹ ಕಾನೂನು ಸುವ್ಯವಸ್ಥೆ? ಒಂದು ದಿನ ನ್ಯಾಯವು ಮೇಲುಗೈ ಸಾಧಿಸೇ ಸಾಧಿಸುತ್ತದೆ ಖಂಡಿತ ಎಂದು ಹೇಳಿದ್ದಾರೆ.

- Advertisement -


ಮಾಜಿ ಸಂಸದ ಅತಿಖ್ ಅಹ್ಮದ್ ಮತ್ತು ತಮ್ಮ ಅಶ್ರಫ್ ಅವರನ್ನು ಯುಪಿ ಪೊಲೀಸರು ಕಸ್ಟಡಿಯಲ್ಲಿದ್ದಾಗಲೇ ಮಾಧ್ಯಮದವರ ಕಣ್ಣ ಮುಂದೆಯೇ ಪಾಯಿಂಟ್ ಬ್ಲ್ಯಾಂಕ್ ರೇಂಜಿನಲ್ಲಿ ಗುಂಡಿಟ್ಟು ಕೊಲ್ಲಲಾಯಿತು ಕಾನೂನು ವ್ಯವಸ್ಥೆಯಿಲ್ಲದ ಜಂಗಲ್ ರಾಜ್ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತಕ್ಷಣ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಿ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಆಗ್ರಹಿಸಿದ್ದಾರೆ.



Join Whatsapp