ವಿಧಾನಸಭೆ ಚುನಾವಣೆ ಹಿನ್ನಲೆ: ಕೊಟ್ಟಿಗೆಹಾರದಲ್ಲಿ ಭದ್ರತಾ ಸಿಬ್ಬಂದಿ ಪಥ ಸಂಚಲನ

Prasthutha|

ಕೊಟ್ಟಿಗೆಹಾರ: ವಿಧಾನ ಸಭೆ ಚುನಾವಣೆ ಪ್ರಯುಕ್ತ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಣಕಲ್ ಹಾಗೂ ಕೊಟ್ಟಿಗೆಹಾರದಲ್ಲಿ 50ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಮತ್ತು ಪೊಲೀಸರು ಸೋಮವಾರ ಸಿಪಿಐ ಸೋಮೇಗೌಡ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆಸಿದರು.’ಕಾನೂನು ಪಾಲನೆ ಹಾಗೂ ಶಾಂತಿ ಸುವ್ಯವಸ್ಥೆಯ ಹಿನ್ನಲೆಯಲ್ಲಿ ಜನರು ನಿರ್ಭಯವಾಗಿ ಮತ ಚಲಾಯಿಸಲು ದೈರ್ಯ ತುಂಬುವ ಹಿತ ದೃಷ್ಟಿಯಿಂದ ಪಥ ಸಂಚಲನ ನಡೆಸಲಾಗಿದೆ’ಎಂದು ಬಣಕಲ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ತಿಳಿಸಿದ್ದಾರೆ.ಸಬ್ ಇನ್ ಸ್ಪೆಕ್ಟರ್ ಗಳಾದ ರನ್ನಗೌಡ ಪಾಟೀಲ್,ಸಿ.ಸಿ.ಪವನ್ ಕುಮಾರ್,ಎಎಸ್ಐ ಟಿ.ಕೆ.ಶಶಿ,ಹಾಗೂ ಸಿಆರ್ ಪಿಎಫ್ ನ ಪಿಎಸ್ಐ ಹಾಗೂ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.



Join Whatsapp