ಮಂಗಳೂರು ನಗರ ವಾಸಿಗಳ ಜಾಗೃತಿಗೆ ಅಪಾಟ್೯ ಮೆಂಟ್ ಅಭಿಯಾನ:ಡಾ. ಕುಮಾರ್

Prasthutha|

ಮಂಗಳೂರು, ಏ.10(ಕ.ವಾ):- ನಗರದಲ್ಲಿ ಈ ಬಾರಿ ಹೆಚ್ಚಿನ ಮತದಾನವಾಗಲು ಅಪಾರ್ಟ್ಮೆಂಟ್ ವಾಸಿಗಳ ಸಹಕಾರ ಅತ್ಯಗತ್ಯವಾಗಿದೆ, ಈ ದಿಸೆಯಲ್ಲಿ ಮಂಗಳೂರು ನಗರದಲ್ಲಿರುವ ಎಲ್ಲಾ ಅಪಾರ್ಟ್ಮೆಂಟ್ ಗಳಲ್ಲಿ ಮತದಾನ ಜಾಗೃತಿಗಾಗಿ ಪರಿಣಾಮಕಾರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ಕೆ ಕೈಜೋಡಿಸುವಂತೆ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಕರೆ ನೀಡಿದರು.

- Advertisement -

ಅವರು ಏ.10ರ ಸೋಮವಾರ ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಅಪಾರ್ಟ್ಮೆಂಟ್ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿಯ ಅಪಾಟ್೯ ಮೆಂಟ್ ಅಭಿಯಾನದ
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ ಶೇ.50 ರಿಂದ 60 ಜನರು ಅಪಾರ್ಟ್ಮೆಂಟ್ ಗಳಲ್ಲಿ ವಾಸವಿದ್ದಾರೆ. ಅಲ್ಲಿ ಮತದಾನ ಮಾಡಲು ಜಾಗೃತಿ ಮೂಡಿಸುವ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ಪ್ರತಿಯೊಂದು ಅಪಾರ್ಟ್ಮೆಂಟ್ ಸಂಘಟನೆಗಳ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಅಥವಾ ಖಜಾಂಚಿಯನ್ನೊಳಗೊಂಡಂತೆ ಅಧಿಕಾರಿಗಳು ತಂಡವನ್ನು ರಚಿಸಲಾಗಿದೆ, ಮಾತ್ರವಲ್ಲದೆ ಆಯಾ ಅಪಾರ್ಟ್ಮೆಂಟ್ ಗಳ ಸಂಘಗಳ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳನ್ನು ಚುನಾವಣಾ ಅಂಬಾಸಿಡರ್ ಗಳನ್ನಾಗಿ ನಿಯೋಜಿಸಲಾಗಿದೆ, ಅವರೊಂದಿಗೆ ಬಿ ಎಲ್ ಓ ಗಳು, ಇತರೆ ಸಿಬ್ಬಂದಿ ಸೇರಿದಂತೆ ಐದರಿಂದ ಆರು ಜನರ ತಂಡವನ್ನು ರಚಿಸಲಾಗಿದ್ದು, ಮೊದಲಿಗೆ ಅವರು ಎಲ್ಲಾ ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿ, ಅಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ದಿನ ಹಾಗೂ ಸಮಯವನ್ನು ನಿಗದಿಪಡಿಸುವರು ಎಂದು ಹೇಳಿದರು.

- Advertisement -

ಅಪಾರ್ಟ್ಮೆಂಟ್ ಗಳಿಗೆ ಯಕ್ಷಗಾನ ಕಲಾವಿದರು ಆಗಮಿಸಿ, ಅವರ ಕಲೆಯ ಮತದಾನದ ಮಹತ್ವದ ಬಗ್ಗೆ ಮೂಲಕ ಜಾಗೃತಿ ಮೂಡಿಸುವರು, ಮಾತ್ರವಲ್ಲ ಅವರು ನಾಗರೀಕರ ಹಕ್ಕು ಚಲಾವಣೆಯ ಆಮಂತ್ರಣ ಪತ್ರಿಕೆ ನೀಡುವರು, ಅದನ್ನು ಸಂಘದವರು ತಮ್ಮ ಅಪಾಟ್೯ ಮೆಂಟ್ ನಲ್ಲಿರುವ ಪ್ರತಿಯೊಂದು ಮನೆಗಪ್ರದರ್ಶನವನ್ನು ಏರ್ಪಡಿಸಲಾಗುವುದು, ಅದಕ್ಕೆ ಸ್ಥಳಾವಕಾಶ ಮಾಡಿಕೊಡಬೇಕು,
ಮಾಡಲಾಗುವುದು ಅಲ್ಲಿಯೇ ಸೈನ್ ಬೋಡ್೯ ವೊಂದನ್ನು ಇರಿಸಲಾಗುವುದು ಸಮಯ ಸಿಕ್ಕಾಗ ಅಪಾರ್ಟ್ಮೆಂಟ್ ವಾಸಿಗಳು ಅದರಲ್ಲಿ ತಮ್ಮ ಸಂದೇಶವನ್ನು ಬರೆದು ಕಳುಹಿಸಬಹುದು ಎಂದು ತಿಳಿಸಿದರು.

ಅದೇ ರೀತಿ ಜಿಲ್ಲೆಯ 255 ಮಂದಿ ಎನ್ ಆರ್ ಐ ಗಳಿಗೆ ಅವರಿಗೆ ಪತ್ರ ಬರೆದು ಮತದಾನಕ್ಕೆ ಆಗಮಿಸುವಂತೆ ಕೋರಲಾಗುವುದು ಎಂದ ಅವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅಪಾಟ್೯ ಮೆಂಟ್ ವಾಸಿಗಳ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ, ಆದರೆ ಇಲ್ಲಿ ಯಾವುದೇ ರೀತಿಯ ರಾಜಕೀಯ ಪ್ರಚಾರಕ್ಕೆ ಅವಕಾಶವಿರುವುದಿಲ್ಲ ಒಂದು ವೇಳೆ ರಾಜಕೀಯ ಪ್ರಚಾರಗಳು ಕಂಡು ಬಂದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಚುನಾವಣಾ ಆಯೋಗ ಈ ಬಾರಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಅದರ ಉಪಯೋಗ ಪಡೆಯಬೇಕು, ಚುನಾವಣೆಯನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಹಬ್ಬ ಆದ ಕಾರಣ ಪ್ರತಿಯೊಬ್ಬ ಭಾರತೀಯ ಕೂಡ ಮತದಾನ ಮಾಡುವ ನಾಗರಿಕ ಹಕ್ಕನ್ನು ಪಡೆದಿದ್ದಾನೆ, ಜವಾಬ್ದಾರಿಯುತ ನಾಗರಿಕರು ಮುಂದೆ ಬಂದು ಮತ ಚಲಾಯಿಸಬೇಕು ಮತ ಚಲಾಯಿಸುವುದು ಮಾನವನ ಹಕ್ಕಾಗಿದೆ, ಮೊದಲು ಕರ್ತವ್ಯ ಮಾಡಬೇಕು ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಚೆನ್ನಬಸಪ್ಪ ಮಾತನಾಡಿ, ಬೆಂಗಳೂರನ್ನು ಹೊರತುಪಡಿಸಿದರೆ ಕಳೆದ ಬಾರಿ ಮಂಗಳೂರು ದಕ್ಷಿಣ ಭಾಗದಲ್ಲಿ ಶೇ. 67ರಷ್ಟು ಮಾತ್ರ ಮತದಾನವಾಗಿದೆ ಈ ಬಾರಿ ಆ ಪ್ರಮಾಣವನ್ನು ಹೆಚ್ಚಿಸಲು ಅಪಾರ್ಟ್ಮೆಂಟ್ ಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.

ಮಂಗಳೂರು ನಗರದ ವಿವಿಧ ಅಪಾರ್ಟ್ಮೆಂಟ್ ಗಳ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.

Join Whatsapp