ಕೇಂದ್ರದ ಅಗ್ನಿಪಥ ಯೋಜನೆ ಕ್ರಮಬದ್ಧ, ನಿರಂಕುಶವಲ್ಲ: ಸುಪ್ರಿಂ ಕೋರ್ಟ್

Prasthutha|

ನವದೆಹಲಿ: ರಾಷ್ಟ್ರೀಯ ಭದ್ರತೆಗಾಗಿ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಅಗ್ನಿಪಥ ಯೋಜನೆ ಜಾರಿಗೆ ತರಲಾಗಿದೆ ಎಂದು ಫೆಬ್ರವರಿ 27ರಂದು ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸೋಮವಾರ ಸುಪ್ರೀಂ ಎತ್ತಿ ಹಿಡಿದಿದೆ.
ಸಿಜೆಐ ಚಂದ್ರಚೂಡ್ ಮತ್ತು ಜಸ್ಟಿಸ್ ಗಳಾದ ಪಿ. ಎಸ್. ನರಸಿಂಹ, ಜೆ. ಬಿ. ಪರ್ದಿವಾಲ ಅವರಿದ್ದ ಪೀಠವು ಅಭ್ಯರ್ಥಿಗಳನ್ನು ದೈಹಿಕ ಮತ್ತಿತರ ಅರ್ಹತೆ ನೋಡಿಯೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ; ಪಟ್ಟಭದ್ರ ಹಿತಾಸಕ್ತಿಯ ನೇಮಕಾತಿ ಇಲ್ಲ ಎಂದು ಹೇಳಿತು.

- Advertisement -


ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ವಕೀಲರಾದ ಗೋಪಾಲ ಕ್ರಿಶನ್ ಮತ್ತು ಎಂ. ಎಲ್. ಶರ್ಮಾ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. “ಸಾರಿ, ನಾವು ಇದರಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಹೋಗುವುದಿಲ್ಲ, ಅದು ಎಲ್ಲ ಸಾಧ್ಯತೆಗಳನ್ನೂ ನೋಡಿ ತೀರ್ಪು ಕೊಟ್ಟಿದೆ” ಎಂದು ಸುಪ್ರಿಂಕೋರ್ಟ್ ಪೀಠ ಹೇಳಿತು.
ಆದರೆ ಭಾರತೀಯ ವಾಯು ಪಡೆಗೆ ಅಗ್ನಿಪಥ ನೇಮಕಾತಿ ಬಗೆಗಿನ 3ನೇ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏಪ್ರಿಲ್ 17ಕ್ಕೆ ಇಟ್ಟಿದೆ. ಐಎಎಫ್ ಮೀಸಲಾತಿ ಬಗ್ಗೆ ಈ ಅರ್ಜಿಯ ಮೇಲೆ ಸೂಕ್ತ ಸಮಜಾಯಿಸಿ ನೀಡಲು ಕೇಂದ್ರವನ್ನು ಕೇಳಿದೆ. ಮಾರ್ಚ್ 27ರಂದು ಸುಪ್ರೀಂ ಕೋರ್ಟ್ ಈ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿತ್ತು.


ಜಸ್ಟಿಸ್ ಗಳಾದ ಸತೀಶ್ ಚಂದ್ರ ಶರ್ಮಾ, ಸುಬ್ರಮಣಿಯಂ ಅವರಿದ್ದ ಹೈಕೋರ್ಟ್ ಪೀಠವು ಫೆಬ್ರವರಿ 27ರಂದು ರಾಷ್ಟ್ರೀಯ ಭದ್ರತೆಗಾಗಿ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಅಗ್ನಿಪಥ ಯೋಜನೆ ಜಾರಿಗೆ ತರಲಾಗಿದೆ ಎಂದು ತೀರ್ಪು ನೀಡಿದ್ದರು. ಅಗ್ನಿಪಥ ಯೋಜನೆಯನ್ನು ಸಂವಿಧಾನಬದ್ಧವಾಗಿ ಕೇಂದ್ರ ಸರಕಾರವು ಪ್ರಜಾಸತ್ತಾತ್ಮಕ ರೀತಿಯಲ್ಲೇ ಜಾರಿಗೆ ತಂದಿದೆ ಎಂದು ಸಹ ದಿಲ್ಲಿ ಉನ್ಯಾ ಹೇಳಿತ್ತು.

- Advertisement -


17ರಿಂದ 21ರ ಪ್ರಾಯದ ಯುವಕರನ್ನು ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಸೇನಾ ಸೇವೆಗೆ ನೇಮಕಾತಿ ಮಾಡಿಕೊಳ್ಳುವ ಯೋಜನೆಯನ್ನು ಕೇಂದ್ರವು ಕಳೆದ ವರ್ಷ ಜೂನ್ 14ರಂದು ಜಾರಿಗೆ ತಂದಿತ್ತು. ನೇಮಕಾತಿ ಆದವರಲ್ಲಿ ಕಾಲು ಭಾಗವನ್ನು ಕಾಯಂ ಮಾಡಿಕೊಳ್ಳುವ ಯೋಜನೆಯೂ ಇದಾಗಿದೆ.
ಅದರ ವಿರುದ್ಧ ಸಾಕಷ್ಟು ಕಡೆ ಪ್ರತಿಭಟನೆಗಳಾದವು. ಮುಂದೆ ಅಗ್ನಿಪಥ ನೇಮಕಾತಿಯ ಪ್ರಾಯವನ್ನು 23 ವರ್ಷಕ್ಕೆ ಏರಿಸಲಾಗಿತ್ತು.

Join Whatsapp