ದಮ್ಮಾಮ್: ಉದ್ಯಾವರ ಇಸ್ಲಾಮಿಕ್ ಎಜುಕೇಶನ್ ಒರ್ಗನೈಝಷನ್ UIEO ಸೌದಿ ಅರೇಬಿಯಾದ ದಮ್ಮಾಮ್ ಸಮಿತಿಯ ವಾರ್ಷಿಕ ಮಹಾ ಸಭೆಯು ದಮ್ಮಾಮಿನ ರೋಸ್ ಗಾರ್ಡನ್ ಸಭಾಂಗಣದಲ್ಲಿ ಜರಗಿತು.
ಅನ್ಸಾರ್ ಮುಕ್ರಿಯವರ ಕಿರಾಅತ್ನೊಂದಿಗೆ ಸಭೆಯು ಆರಂಭಗೊಂಡು ಹ್ಯಾರಿಸ್
ಕಜ ಸಭೆಯನ್ನು ಸ್ವಾಗತಿಸಿದರು,ಮೊಯಿದಿನ್ ಬೆಳ್ತರಿಯವರು ಸಭೆಯನ್ನು ಉದ್ಘಾಟಿಸಿ 33 ವರ್ಷಗಳ UIEO ಸಮಿತಿಯ ಕಾರ್ಯಕರ್ಮಗಳನ್ನು ಶ್ಲಾಘಿಸಿದರು.
ವಾರ್ಷಿಕ ವರದಿ ಮತ್ತು ಸಮಿತಿಯ ಕಾರ್ಯನಿರೂಪಣೆ ಲೆಕ್ಕಪತ್ರವನ್ನು ಕಾರ್ಯದರ್ಶಿ ನಜೀರ್ ಶಾಫಿಯವರು ಮಂಡಿಸಿದರು.ನೂತನ ಆಡಳಿತ ಸಮಿತಿ ಸಭೆಯಲ್ಲಿ UIEO ಸಮಿತಿಯ ಡ್ರೀಮ್ ಪ್ರಾಜೆಕ್ಟ್ ವಿವರಣೆ ಹಾಗು ಕಳೆದ ವರ್ಷಗಳ ಸಮಾಜ ಸೇವೆ ಇನ್ನಿತರ ಮಾಹಿತಿಯನ್ನು ಚರ್ಚೆ ಮಾಡಲಾಯಿತು,
ನೂತನ ಸಮಿತಿಯ ವಿವರಣೆ:
ಅಧ್ಯಕ್ಷರಾಗಿ ನಜಿರ್ ಶಾಫಿ, ಉಪಾಧ್ಯಕ್ಷರಾಗಿ ಸಯ್ಯದ್ ತಹ್ಸೀಮ್ ತಂಗಳ್, ಹಾಗು ಬುಶ್ರಾ ಉದ್ಯಾವರ,
ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮಂಜೇಶ್ವರ,
ಕಾರ್ಯದರ್ಶಿಯಾಗಿ ನಿಝರ್ ಗುಡ್`ವೇ ಹಾಗು ಆಶಿಕ್ ಬಿಎಸ್ ನಗರ,
ಮಾಧ್ಯಮ ಹಾಗು ಕಾರ್ಯನಿರ್ವಾಹಕ ಸಲಾಮ್ ಸಿಲ್ಸಿಲಾ
ಕೋಶಾಧಿಕಾರಿಯಾಗಿ ಹ್ಯಾರಿಸ್ ಕಜ ಅವರನ್ನು ಆರಿಸಲಾಯಿತು.
UIEO ಸಲಹಾ ಸಮಿತಿ ಸದಸ್ಯರು:
ಮೊಯಿದಿನ್ ಬೆಳ್ತರಿ,ಇಸ್ಮಾಯಿಲ್ ಎಂ ಪಿ, ಸಯ್ಯದ್ ನಜ್ಮುದ್ದೀನ್ ತಂಗಳ್,
UIEO ಕಾರ್ಯಕಾರಿ ಸಮಿತಿ:
ಫಯಾಜ್`10ಮೈಲ್, ಬಷೀರ್ ಝಮಿಲ್, ಫರಾಜ್ ಮಾಹಿಮ್,ಅನ್ಸಾರ್ ಝಮಿಲ್,ಉನೈಫ್ ಉದ್ಯಾವರ,ಆಸೀಫ್ ಕೆಕೆ, ಮೂಸಾ ಕುಚ್ಚಿಕ್ಕಾಡ್, ನೂರುದ್ಧೀನ್ ಉದ್ಯಾವರ ಅನ್ಸಾರ್ ಮುಕ್ರಿ, ಇವರನ್ನುಆರಿಸಲಾಯಿತು.
ನೌಶಾದ್ ಮಂಜೇಶ್ವರ ಸದಸ್ಯತ್ವ ಅಭಿಯಾನ, ಸಮಿತಿಯ ಒಕ್ಕೂಟ,ವಿದ್ಯಾರ್ಥಿಗಳ ಆರ್ಥಿಕ ಸಹಾಯ ಪರಿಗಣನೆ, ಮಾತುಗಳೊಂದಿಗೆ ದನ್ಯವಾಧಗಳನ್ನು ಅರ್ಪಿಸಿದರು.