ಮೇಘಾಲಯ: ಬಿಜೆಪಿ-ಎನ್‌ಪಿಪಿ ಮೈತ್ರಿ| ಬೆಂಬಲ ಘೋಷಿಸಿದ್ದ ಶಾಸಕನ ಕಚೇರಿಗೆ ಬೆಂಕಿ ಇಟ್ಟ ಕಾರ್ಯಕರ್ತರು

Prasthutha|

ಶಿಲ್ಲಾಂಗ್ : ಬಿಜೆಪಿ-ಎನ್‌ಪಿಪಿ ಮೈತ್ರಿಗೆ ಬೆಂಬಲ ಘೋಷಿಸಿದ್ದ ಎಚ್‌ಎಸ್‌ಪಿಡಿಪಿ ಪಕ್ಷದ ಶಾಸಕನ ಕಚೇರಿಗೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ.

- Advertisement -

ಪ್ರಾದೇಶಿಕ ಪಕ್ಷವಾದ ಎಚ್‌ಎಸ್‌ಪಿಡಿಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಶಾಸಕ ಮಥಾಡಿಯಸ್ ಟಿಖರ್ ಅವರ ಕಚೇರಿಗೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ.

ಮಥಾಡಿಯಸ್ ಟಿಖರ್ ಮತ್ತು ಶಕ್ಲಿಯಾರ್ ವಜ್ರಿ ನಿನ್ನೆ ಎನ್‌ಪಿಪಿ-ಬಿಜೆಪಿ ಮೈತ್ರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು.

- Advertisement -

ಎನ್‌ಪಿಪಿ 26 ಸ್ಥಾನಗಳನ್ನು ಗೆದ್ದಿದ್ದರೂ ಬಹುಮತವನ್ನು ಸಾಬೀತುಪಡಿಸಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಸೇರಿ ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಎರಡು ಎಚ್‌ಎಸ್‌ಪಿಡಿಪಿ ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿತ್ತು. ಇದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

Join Whatsapp