ನವದೆಹಲಿ: ಭಾರತವು ವಾಯುಪಡೆಯ ವಿಮಾನದ ಮೂಲಕ ಟರ್ಕಿಗೆ ಭೂಕಂಪ ಪರಿಹಾರ ಸಾಮಗ್ರಿಯ ಮೊದಲ ಪ್ಯಾಕೇಜ್ ಅನ್ನು ಟರ್ಕಿಗೆ ಸೋಮವಾರ ರಾತ್ರಿಯೇ ರವಾನಿಸಿದೆ.
ಪರಿಹಾರ ಸಾಮಗ್ರಿಯಲ್ಲಿ ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿ, ಸುಧಾರಿತ ಡ್ರಿಲ್ಲಿಂಗ್ ಉಪಕರಣಗಳು ಮತ್ತು ಸಾಧನ–ಸಲಕರಣೆಗಳನ್ನು ಒಳಗೊಂಡ ಪರಿಣತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಶೋಧ ಮತ್ತು ರಕ್ಷಣಾ ತಂಡವನ್ನು ಒಳಗೊಂಡಿದೆ.
ಭಾರತದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿವೆ. ಭೂಕಂಪ ಪರಿಹಾರ ಸಾಮಗ್ರಿಯ ಮೊದಲ ಪ್ಯಾಕೇಜ್ ಟರ್ಕಿಗೆ ಹೊರಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.