ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಸೆಮಿಫೈನಲ್: ಕರ್ನಾಟಕ ತಂಡಕ್ಕೆ ನಿಹಾಲ್ ಉಲ್ಲಾಳ ಸೇರ್ಪಡೆ

Prasthutha|

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡವನ್ನು ಪ್ರಕಟಿಸಿದ್ದು, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ನಿಹಾಲ್ ಉಲ್ಲಾಳ ಅವರನ್ನು ಆಯ್ಕೆ ಮಾಡಲಾಗಿದೆ.

- Advertisement -


ಫೆಬ್ರವರಿ 8ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ತಂಡವು ಸೌರಾಷ್ಟ್ರವನ್ನು ಎದುರಿಸಲಿದೆ.
ವಿಕೆಟ್ ಕೀಪರ್ ಬಿ.ಆರ್. ಶರತ್ ಅವರನ್ನು ಕೈಬಿಟ್ಟು ನಿಹಾಲ್ ಉಲ್ಲಾಳ ಅವರನ್ನು ಆಯ್ಕೆ ಮಾಡಲಾಗಿದ್ದು, ಶರತ್ ಹೊರತುಪಡಿಸಿ ಉಳಿದ ಆಟಗಾರರು ತಂಡದಲ್ಲಿ ಮುಂದುವರೆದಿದ್ದಾರೆ.


ತಂಡದ ಪಟ್ಟಿ: ಮಯಂಕ್ ಅಗರವಾಲ್ (ನಾಯಕ), ಆರ್. ಸಮರ್ಥ್ (ಉಪನಾಯಕ), ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ, ಕೆ.ವಿ. ಸಿದ್ಧಾರ್ಥ್, ಶರತ್ ಶ್ರೀನಿವಾಸ್, ನಿಹಾಲ್ ಉಲ್ಲಾಳ (ಇಬ್ಬರೂ ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿ. ಕೌಶಿಕ್, ವಿದ್ವತ್ ಕಾವೇರಪ್ಪ, ವಿ. ವೈಶಾಖ, ಎಂ. ವೆಂಕಟೇಶ್, ಶುಭಾಂಗ್ ಹೆಗಡೆ.
ಪಿ.ವಿ. ಶಶಿಕಾಂತ್ (ಕೋಚ್), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್), ಎ. ರಮೇಶ್ ರಾವ್ (ಮ್ಯಾನೇಜರ್), ಜಾಬಪ್ರಭು (ಫಿಸಿಯೊ), ಕೆ.ಸಿ. ಅವಿನಾಶ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಸಿ.ಎಂ. ಸೋಮಸುಂದರ್ (ಮಸಾಜ್ ತಜ್ಞ), ರಾಜ್ ಕೀರ್ತಿ ಕಪಾಡಿಯಾ (ವಿಡಿಯೊ ಅನಾಲಿಸ್ಟ್).

Join Whatsapp