ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿಯ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ದ್ವೇಷ ಭಾಷಣದಿಂದ ಕುಖ್ಯಾತಿ ಪಡೆದಿರುವ ವಕೀಲೆ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೊಲಿಜಿಯಂಗೆ ನಾವು ನಿರ್ದೇಶನ ಮಾಡಲು ಬರುವುದಿಲ್ಲ, ಆದ್ದರಿಂದ ಗೌರಿ ಅವರ ಪ್ರಮಾಣವಚನ ಸಮಾರಂಭಕ್ಕೆ ತಡೆ ನೀಡುವುದಿಲ್ಲ ಎಂದು ಹೇಳಿ ಅರ್ಜಿ ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿ ಕೊನೆಗೆ ಅರ್ಜಿಯನ್ನು ವಜಾಗೊಳಿಸಿತು.

- Advertisement -


ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಮಚಂದ್ರನ್, ವಿಕ್ಟೋರಿಯಾ ಗೌರಿ ಅವರ ದ್ವೇಷ ಭಾಷಣ ಸಂವಿಧಾನದ ವಿರೋಧಿಯಾಗಿದ್ದು ಅವರು ಪ್ರಮಾಣವಚನ ಸ್ವೀಕರಿಸುವುದು ಅಪ್ರಾಮಾಣಿಕವಾಗಲಿದೆ. ಆ ಪ್ರಮಾಣ ವಚನ ಕಾಗದದ ಮೇಲೆ ಮಾತ್ರ ಉಳಿಯಲಿದೆ. ಆದ್ದರಿಂದ ಪ್ರಮಾಣ ವಚನಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ಈ ಮಧ್ಯೆ ವಿಚಾರಣೆ ನಡೆಯುತ್ತಿರುವಾಗಲೇ, ಮದ್ರಾಸ್‌ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ವಿಕ್ಟೋರಿಯಾ ಗೌರಿ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.


ನ್ಯಾಯಮೂರ್ತಿ ಗವಾಯಿ ಅವರು, ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಸೇರುವ ಮೊದಲು ನನಗೂ ರಾಜಕೀಯ ಹಿನ್ನೆಲೆ ಇತ್ತು. ಈಗ ನಾನು 20 ವರ್ಷಗಳಿಂದ ಅಧಿಕಾರದಲ್ಲಿದ್ದೇನೆ. ಆದರೆ ನಾನು ಎಂದಿಗೂ ಅದರ ಪ್ರಭಾವಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದರು.

- Advertisement -


ವಕೀಲ ರಾಮಚಂದ್ರನ್ ಅವರು ಹೌದು, ರಾಜಿಂದರ್ ಸಾಚಾರ್ ಕೂಡ ಇದ್ದರು. ಆಗ ಗವಾಯಿ ಅವರು ನ್ಯಾ. ಕೃಷ್ಣಯ್ಯರ್ ಕೂಡ ರಾಜಕೀಯ ಹಿನ್ನೆಲೆಯವರಾಗಿದ್ದರು. ಆದರೆ ಅವರು ಯಾರು ಅದರ ಪ್ರಭಾವವನ್ನು ನ್ಯಾಯಾಂಗದಲ್ಲಿ ಪ್ರದರ್ಶಿಸಿಲ್ಲ. ಗೌರಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸದಿದ್ದರೆ, ಅವರಿಗೆ ಪದೋನ್ನತಿ ನೀಡದಿರಲು ಕೊಲಿಜಿಯಂಗೆ ಅಧಿಕಾರ ಇಲ್ಲವೇ? … ಈ ವಾದದಿಂದ ಕೊಲಿಜಿಯಂನಲ್ಲಿ ನಂಬಿಕೆ ಮತ್ತು ಗೌರವದ ಕೊರತೆಯನ್ನು ತೋರಿಸಿದಂತಾಗುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದರು.