ಜಯಲಲಿತಾ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ

Prasthutha|

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸಂಬಂಧಿಸಿದ ಕೆಲ ಆಸ್ತಿಯನ್ನು ಹರಾಜು ಹಾಕಲು ಕೋರ್ಟ್ ಅನುಮತಿ ನೀಡಿದೆ.

- Advertisement -

ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ದಾಳಿ ಮಾಡಿ ಜಯಲಲಿತಾಗೆ ಸೇರಿದ ಸೀರೆಗಳು, ವಾಚ್ ಗಳು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವೆಲ್ಲವನ್ನೂ ಕರ್ನಾಟಕ ವಿಧಾನಸೌಧದ ಖಜಾನೆಯಲ್ಲಿ ಇರಿಸಲಾಗಿತ್ತು. ಆದರೆ ಜಯಲಲಿತಾ ಅವರು ನಿಧನರಾದ ಹಿನ್ನೆಲೆಯಲ್ಲಿ ಆ ಆಸ್ತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುವಂತೆ ಆರ್ ಟಿಐ ಕಾರ್ಯಕರ್ತ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ವಶಪಡಿಸಿಕೊಂಡ ವಸ್ತುಗಳನ್ನು ಮಾರಾಟ ಮಾಡಲು ಸೂಕ್ತವಾದ ಅಧಿಕಾರಿಯನ್ನು ನೇಮಿಸುವಂತೆ ಜೊತೆಗೆ ಬಂದ ಹಣದಲ್ಲಿ ಕರ್ನಾಟಕ ಸರ್ಕಾರ ಖರ್ಚು ಮಾಡಿದ್ದ 5 ಕೋಟಿಯನ್ನು ತನ್ನಲ್ಲೇ ಇಟ್ಟುಕೊಂಡು ಉಳಿದ ಬಾಕಿ ಹಣವನ್ನು ತಮಿಳುನಾಡಿನ ಸರ್ಕಾರಕ್ಕೆ ನೀಡುವಂತೆ ಸೂಚನೆ ನೀಡಿದೆ.



Join Whatsapp