ಹಜ್ ಮತ್ತು ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ; ನೇರವಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ

Prasthutha|

ರಿಯಾದ್: ಸೌದಿ ಅರೇಬಿಯಾದ ವಿಷನ್ 2030 ರ ಪ್ರಕಾರ ಒಂದು ವರ್ಷದಲ್ಲಿ 3 ಕೋಟಿ ಉಮ್ರಾ ಯಾತ್ರಿಕರನ್ನು ದೇಶಕ್ಕೆ ಕರೆತರುವ ಗುರಿಯನ್ನು ಹಜ್ ಮತ್ತು ಉಮ್ರಾ ಸಚಿವಾಲಯವು ಮುಂದಿಟ್ಟಿದೆ.
ಜಗತ್ತಿನ ಪ್ರತಿಯೊಬ್ಬ ಮುಸಲ್ಮಾನನೂ ಪವಿತ್ರ ಹಜ್ ಉಮ್ರಾ ನಿರ್ವಹಿಸಬೇಕೆಂಬ ನಿಟ್ಟಿನಲ್ಲಿ ಮಖಾಮ್ ಪೋರ್ಟಲ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಇನ್ನು ಮುಂದೆ ಹಜ್ ಮತ್ತು ಉಮ್ರಾ ನಿರ್ವಹಿಸಲು ಬಯಸುವವರು ಏಜೆನ್ಸಿಗಳನ್ನು ಸಂಪರ್ಕಿಸದೆ ನೇರವಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ.

- Advertisement -


ಈ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾದ ಈ ಯೋಜನೆಯನ್ನು ಹಲವಾರು ಸೇವಾ ನಿರ್ವಾಹಕರು ಬಳಸುತ್ತಿದ್ದು, ಇದು ಹಜ್ ಮತ್ತು ಉಮ್ರಾ ನಿರ್ವಹಿಸಲು ಉದ್ದೇಶಿಸುವ ವ್ಯಕ್ತಿಗಳಿಗೆ ಆನ್ಲೈನ್ ವೀಸಾ, ವಸತಿ ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

https://maqam.gds.haj.gov.sa/Home/OTAs ಎಂಬ ಈ ಲಿಂಕ್ ತೆರೆದು ಅರ್ಜಿದಾರರ ದೇಶ ಮತ್ತು ಇತರ ಮಾಹಿತಿಯನ್ನು ಭರ್ತಿ ಮಾಡಿದರೆ, ಹೋಟೆಲ್ ಗಳು ವಸತಿಗಾಗಿ ವಿಧಿಸುವ ಶುಲ್ಕ ಮತ್ತು ಇತರ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.

- Advertisement -

ಹೊಸ ಪೋರ್ಟಲ್ ನ ಮಾಹಿತಿಯ ಪ್ರಕಾರ, ಸೌದಿ ಅರೇಬಿಯಾದಲ್ಲಿ ವಸತಿ ಮತ್ತು ಸಾರಿಗೆ ವೆಚ್ಚವು 700 ರಿಯಾಲ್(15000ರೂ)ಗಳಿಗಿಂತ ಕಡಿಮೆಯಿದೆ. ಸೌದಿ ಸರಕಾರದ ಈ ವಿಶೇಷ ಯೋಜನೆಯು ಹಜ್ ಮತ್ತು ಉಮ್ರಾ ನಿರ್ವಹಿಸಲು ಬಯಸುವ ಜಗತ್ತಿನ ಬಡ ಮುಸಲ್ಮಾನರಿಗೆ ಬಹಳಷ್ಟು ಉಪಕಾರಿಯಾಗಿದೆ.

Join Whatsapp