ಫಿಫಾ ವಿಶ್ವಕಪ್ ಗೆ ಬಳಸಿದ 3000 ಬಸ್ಸುಗಳನ್ನು ಲೆಬನಾನ್‌ಗೆ ದೇಣಿಗೆ ನೀಡಿದ ಕತಾರ್

Prasthutha|

ದೋಹಾ: ಫಿಫಾ ವಿಶ್ವಕಪ್‌ ನಲ್ಲಿ ಬಳಸಿದ ಬಸ್ಸುಗಳನ್ನು ಲೆಬನಾನ್ ಗೆ ನೀಡಲು ಕತಾರ್ ಸರಕಾರ ನಿರ್ಧರಿಸಿದೆ.

- Advertisement -

ಲೆಬನಾನಿನ ಸಚಿವ ಅಲಿ ಹಮಿಯೆಹ್, ಅಲ್-ಜದೀದ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, “ಪ್ರಧಾನಿ ನಜೀಬ್ ಮಿಕಾತಿ ಅವರು ಇತ್ತೀಚೆಗೆ ಕತಾರ್‌ ಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶ್ವಕಪ್ ನಲ್ಲಿ ಬಳಸಿದ ಬಸ್ಸುಗಳನ್ನು ತಮಗೆ ನೀಡುವಂತೆ ಕತಾರ್ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದರು. ಮಿಕಾತಿ ಅವರ ಮನವಿಗೆ ಕತಾರ್ ಸರ್ಕಾರ ಸ್ಪಂದಿಸಿದೆ. ಲೆಬನಾನ್ ಎದುರಿಸುತ್ತಿರುವ ಸಾರಿಗೆ ಬಿಕ್ಕಟ್ಟುಗಳು ಮತ್ತು ಸಾರ್ವಜನಿಕ ಸಾರಿಗೆ ಸಾಮರ್ಥ್ಯಗಳನ್ನು ಹೆಚ್ಚಿಸುವ ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಮಿಕಾತಿ ಈ ಮನವಿಯನ್ನು ಮಾಡಿದ್ದರು” ಎಂದು ಹೇಳಿದ್ದಾರೆ.

ಕತಾರ್ ಸರಕಾರವು FIFA ವಿಶ್ವಕಪ್ ಗೆ ಬಳಸಿದ ಸವಲತ್ತುಗಳನ್ನು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ರಾಷ್ಟ್ರಗಳಿಗೆ ವಿತರಿಸಲು ಉದ್ದೇಶಿಸಿದೆ.

- Advertisement -

ಬಸ್ಸುಗಳ ಜೊತೆಗೆ ಫಿಫಾ ಫುಟ್ಬಾಲ್ ಕ್ರೀಡಾಂಗಣಗಳು ಮತ್ತು ಕ್ರೀಡಾಂಗಣದ ಸಾವಿರಾರು ಆಸನಗಳನ್ನು ಕತಾರ್ ದೇಣಿಗೆ ನೀಡಲು ನಿರ್ಧರಿಸಿದೆ.



Join Whatsapp