►ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡಿದ್ದಾರೆ
ಬೆಂಗಳೂರು: ಬಿಜೆಪಿಯಲ್ಲಿ ಕೆಲವರಿಗೆ ಮದುವೆನೇ ಆಗಿಲ್ಲ, ಇನ್ನು ಲವ್ ಬಗ್ಗೆ ಏನು ಗೊತ್ತು? ಮೊದಲು ಯುಪಿ ಸಿಎಂಗೆ ಲವ್ ಮಾಡೋಕೆ ಹೇಳಿ, ಆಮೇಲೆ ಜಿಹಾದ್ ಬಗ್ಗೆ ನೋಡಿ ಎಂದು ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ ಇಬ್ರಾಹೀಂ ಕುಟುಕಿದ್ದಾರೆ.
`ರಸ್ತೆ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ, ಆದರೆ ಲವ್ ಜಿಹಾದ್ ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ’ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಇಬ್ರಾಹೀಂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಲವ್ ಮಾಡಿ ಗೊತ್ತಿಲ್ಲ, ಲವ್ ಬಗ್ಗೆ ಏನೂ ಗೊತ್ತಿಲ್ಲ. ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡಿದ್ದಾರೆ. ಜನ ಚುನಾವಣೆಯಲ್ಲಿ ಇಂಥವರನ್ನು ಒದ್ದು ಹೊರಗೆ ಹಾಕಬೇಕು ಎಂದಿದ್ದಾರೆ.
ಬಿಜೆಪಿ ಅಜೆಂಡಾ, ಸಂಸ್ಕೃತಿ ಏನು ಎಂದು ಕಟೀಲ್ ತೋರಿಸಿಕೊಂಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡಿದ್ದಾರೆ. ಮುಂದೆ ಬೆಳೆಯೋ ಮಕ್ಕಳಿಗೆ ರಾಜ್ಯಾಧ್ಯಕ್ಷರು ಯಾವ ರೀತಿ ಸಂದೇಶ ನೀಡಿದ್ದಾರೆ? ಏನು ಪಾಠ ಮಾಡ್ತಿದ್ದಾರೆ? ಎಂದು ಇದರಲ್ಲಿ ಗೊತ್ತಾಗುತ್ತಿದೆ ಎಂದು ಇಬ್ರಾಹೀಂ ಹೇಳಿದ್ದಾರೆ.