ಇಸ್ರೇಲ್ ಬಲಪಂಥೀಯ ಸಚಿವರಿಂದ ಅಲ್-ಅಕ್ಸಾ ಮಸೀದಿ ಕಾಂಪೌಂಡ್’ಗೆ ಪ್ರವೇಶ: ಅರಬ್ ರಾಷ್ಟ್ರಗಳ ಖಂಡನೆ

Prasthutha|

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಜೋರ್ಡಾನ್ ಇಸ್ರೇಲ್ ಬಲಪಂಥೀಯ ಸಚಿವ ಇಟಮಾರ್ ಬೆನ್-ಗ್ವಿರ್ ಅವರ ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಪ್ರವೇಶವನ್ನು ತೀವ್ರವಾಗಿ ಖಂಡಿಸಿದೆ. ಅವರ ಭೇಟಿಯನ್ನು “ಅಭೂತಪೂರ್ವ ಪ್ರಚೋದನೆ” ಎಂದು ಕರೆದಿದೆ.
ಫೆಲೆಸ್ತೀನ್ ಮತ್ತು ಹಲವಾರು ಅರಬ್ ರಾಷ್ಟ್ರಗಳು ಇಟಮಾರ್ ಬೆನ್-ಗ್ವಿರ್ ಅವರ ಭೇಟಿಯನ್ನು ಖಂಡಿಸುತ್ತವೆ. ಇದು ಪವಿತ್ರ ಸ್ಥಳದ ಸ್ಥಿತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ ಎಂದು ಅವು ಆತಂಕ ವ್ಯಕ್ತಪಡಿಸಿವೆ.
“ನಮ್ಮ ಸರ್ಕಾರವು ಹಮಾಸ್ ಬೆದರಿಕೆಗಳಿಗೆ ಶರಣಾಗುವುದಿಲ್ಲ” ಎಂದು ಭಾರೀ ಭದ್ರತೆಯಲ್ಲಿ ಇಸ್ಲಾಂನ ಮೂರನೇ ಪವಿತ್ರ ಸ್ಥಳವಾದ ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಪ್ರವೇಶಿಸಿದ ಬೆನ್-ಗ್ವಿರ್ ಹೇಳಿದರು.
ಬೆನ್-ಗ್ವಿರ್ ತಮ್ಮ ಭೇಟಿಯ ನಂತರ ಟ್ವಿಟ್ಟರ್’ನಲ್ಲಿ “ಸ್ಥಳವು ಎಲ್ಲರಿಗೂ ಮುಕ್ತವಾಗಿದೆ ಮತ್ತು ಹಮಾಸ್ ಬೆದರಿಕೆ ಹಾಕಿ ನನ್ನನ್ನು ತಡೆಯಬಹುದೆಂದು ಭಾವಿಸಿದರೆ, ಸಮಯವು ಬದಲಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ” ಎಂದು ಬರೆದಿದ್ದಾರೆ.

Join Whatsapp