ಶಬರಿಮಲೆಯಿಂದ ಹಿಂದಿರುಗುವಾಗ ಅಪಘಾತ: ಬಾಲಕ ಮೃತ್ಯು

Prasthutha|

ಧಾರವಾಡ: ಶಬರಿಮಲೆಗೆ ತೆರಳಿದ್ದ ಬಾಲಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಯಡಪ್ಪಾಲ ಎಂಬಲ್ಲಿ ನಡೆದಿದೆ.

- Advertisement -


ಧಾರವಾಡ ಸೈದಾಪುರದ ಸುಮಿತ್ ಪಾಂಡೆ (10) ಅಪಘಾತದಲ್ಲಿ ಮೃತಪಟ್ಟ ಬಾಲಕ.


ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ ಏಸ್ ವಾಹನದಲ್ಲಿ ಅಯ್ಯಪ್ಪ ಮಾಲೆಧಾರಿಗಳು ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕೇರಳದ ಮನಪುರಂನ ಯಡಪ್ಪಾಲ ಎಂಬಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

Join Whatsapp