ಮುಂಬೈ : ತನ್ನ ಚಾನೆಲ್ ನ ಕಾರ್ಯಕ್ರಮದಲ್ಲಿ ಧರ್ಮದ್ವೇಷಿ ಮಾತುಗಳನ್ನಾಡಿದ್ದಕ್ಕೆ ಬ್ರಿಟಿಷ್ ಮಾಧ್ಯಮ ಕಾವಲು ಸಂಸ್ಥೆಗೆ 280 ಬಾರಿ ಕ್ಷಮೆ ಯಾಚಿಸಿರುವ ಬಿಜೆಪಿ ಬೆಂಬಲಿಗ ಪತ್ರಕರ್ತ, ‘ರಿಪಬ್ಲಿಕ್ ಟಿವಿ’ ಸಂಪಾದಕ ಅರ್ನಾಬ್ ಗೋಸ್ವಾಮಿ ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ವಸ್ತುವಾಗಿದ್ದಾರೆ.
ಬ್ರಿಟಿಷ್ ಮಾಧ್ಯಮ ಕಾವಲು ಸಂಸ್ಥೆಯಲ್ಲಿ ಕ್ಷಮೆ ಯಾಚಿಸಿರುವ ತನ್ನ ಕಾರ್ಯಕ್ರಮಗಳಲ್ಲಿ ಬಿಜೆಪಿ ಸರಕಾರ, ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳುವ ಅರ್ನಾಬ್ ಗೋಸ್ವಾಮಿ ಅವರನ್ನು, ಬಿಜೆಪಿಯ ಸೈದ್ಧಾಂತಿಕ ನಾಯಕತ್ವದಲ್ಲಿ ಒಬ್ಬರಾದ ಸಾವರ್ಕರ್ ಅವರಿಗೆ ಹೋಲಿಸಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಜೈಲಿನಿಂದ ಬಿಡುಗಡೆಗೊಳ್ಳಲು ಸಾರ್ವಕರ್ ಹಲವು ಬಾರಿ ಬ್ರಿಟಿಷ್ ಸರಕಾರದ ಕ್ಷಮೆ ಯಾಚಿಸಿದ್ದುದನ್ನು ಇಲ್ಲಿ ಸ್ಮರಿಸಲಾಗಿದೆ. ಬ್ರಿಟಿಷರ ಕ್ಷಮೆ ಯಾಚಿಸುವಲ್ಲಿ ಸಾವರ್ಕರ್ ಅವರನ್ನೂ ಗೋಸ್ವಾಮಿ ಮೀರಿಸಿದ್ದಾರೆ ಎಂಬ ಕುಹಕದ ನುಡಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆಗೊಳಪಟ್ಟಿವೆ.
2019, ಸೆ.6ರಂದು ‘ರಿಪಬ್ಲಿಕ್ ಟಿವಿ’ಯ ಸೋದರ ಸಂಸ್ಥೆ, ಹಿಂದಿ ಆವೃತ್ತಿ ‘ರಿಪಬ್ಲಿಕ್ ಭಾರತ್’ನಲ್ಲಿ ‘ಪೂಚ್ತಾ ಹೇ ಭಾರತ್’ ಕಾರ್ಯಕ್ರಮದಲ್ಲಿ ಧರ್ಮ ದ್ವೇಷದ ಮಾತುಗಳನ್ನಾಡಿದ್ದುದಕ್ಕಾಗಿ ಚಾನೆಲ್ ವಿರುದ್ಧ ಬ್ರಿಟಿಷ್ ಮಾಧ್ಯಮ ಕಾವಲು ಸಂಸ್ಥೆ ಸುಮಾರು 20 ಲಕ್ಷ ರೂ. ದಂಡ ವಿಧಿಸಿತ್ತು ಮತ್ತು ಕ್ಷಮೆ ಯಾಚಿಸುವಂತೆ ಸೂಚಿಸಿತ್ತು. ಆ ಪ್ರಕಾರ, ಟಿವಿ ವಾಹಿನಿಯು 280 ಬಾರಿ ಕ್ಷಮೆ ಯಾಚಿಸಿದೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ ಕೆಲವೊಂದು ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.