ಕೃಷಿ ಕಾನೂನು ತಡೆಯಲು ರಾಷ್ಟ್ರಪತಿಗೆ ಮನವಿ ಸಲ್ಲಿಸಲು ತೆರಳಿದ ರಾಹುಲ್ ಗಾಂಧಿಗೆ ತಡೆ | ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ, ರಾಷ್ಟ್ರಪತಿಯವರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ. ಬಳಿಕ, ಕೆಲವರನ್ನು ಮಾತ್ರ ರಾಷ್ಟ್ರಪತಿ ಭವನ ಪ್ರವೇಶಕ್ಕೆ ಅವಕಾಶಕೊಟ್ಟು, ರಾಹುಲ್ ಗಾಂಧಿ ಅವರ ಸಹೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಕೃಷಿ ಕಾನೂನು ಹಿಂಪಡೆಯಲು ತಾವು ಮಧ್ಯಪ್ರವೇಶಿಸಬೇಕೆಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಒತ್ತಾಯಿಸುವ ಸಲುವಾಗಿ ರಾಷ್ಟ್ರಪತಿ ಭವನಕ್ಕೆ ರಾಹುಲ್ ಗಾಂಧಿ ಮೆರವಣಿಗೆಯಲ್ಲಿ ತೆರಳಿದ್ದರು. ಪೊಲೀಸರು ಅವರನ್ನು ತಡೆದು ನಿಯೋಗವೊಂದನ್ನು ರಾಷ್ಟ್ರಪತಿ ಭವನದೊಳಕ್ಕೆ ತೆರಳಲು ಅವಕಾಶ ನೀಡಿದೆ.

ಇದೇ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದು, ಬಸ್ಸೊಂದರಲ್ಲಿ ಪೊಲೀಸ್ ಠಾಣೆಯೊಂದಕ್ಕೆ ಕಳುಹಿಸಿಕೊಡಲಾಗಿದೆ. ಶೀಘ್ರವೇ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

- Advertisement -

ರಾಹುಲ್ ಗಾಂಧಿ ಅವರ ಜೊತೆಗೆ ಅವರ ಸಹೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಇದ್ದರು.

ಯಾವುದೇ ಭಿನ್ನಾಭಿಪ್ರಾಯದ ಶಕ್ತಿಗಳನ್ನು ಸರಕಾರ ಭಯೋತ್ಪಾದಕರ ಸಾಲಿಗೆ ಸೇರಿಸುತ್ತಿದೆ. ನಾವು ರೈತರಿಗೆ ಬೆಂಬಲವಾಗಿ ನಮ್ಮ ಧ್ವನಿಯನ್ನು ಎತ್ತಲು ಈ ಮೆರವಣಿಗೆ ನಡೆಸುತ್ತಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.  

Join Whatsapp