ಫಿಫಾ ವಿಶ್ವಕಪ್ | ನಾಕೌಟ್ ಹಂತಕ್ಕೆ ಅರ್ಜೆಂಟೀನಾ, ಪೋಲೆಂಡ್, ಹೊರಬಿದ್ದ ಸೌದಿ ಅರೇಬಿಯಾ 

Prasthutha|

ದೋಹಾ: ಕತಾರ್‌’ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯ ಗುಂಪು ಹಂತದ ನಿರ್ಣಾಯಕ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೋಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ, ಅಂತಿಮ 16ರ ಘಟ್ಟ ಪ್ರವೇಶಿಸಿದೆ. ಗ್ರೂಪ್ ಸಿಯ ಎರಡನೇ ಪಂದ್ಯದಲ್ಲಿ ಮೆಕ್ಸಿಕೋ, 1-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು

- Advertisement -

ಸ್ಟೇಡಿಯಂ 974ನಲ್ಲಿ ನಡೆದ ಮಹತ್ವದ ಪಂದ್ಯದ ದ್ವಿತೀಯಾರ್ಧದ ಮೊದಲ ನಿಮಿಷದಲ್ಲೇ (46ನೇ ನಿಮಿಷ) ಮ್ಯಾಕ್ ಅಲ್ಲಿಸ್ಟೆರ್ ಮತ್ತು 67ನೇ ನಿಮಿಷದಲ್ಲಿ ಅಲ್ವಾರೆಝ್ ಗೋಲು ದಾಖಲಿಸುವ ಮೂಲಕ ಅರ್ಜೆಂಟೀನಾ ಹೋರಾಟಕ್ಕೆ ಬಲ ತುಂಬಿದರು.

39ನೇ ನಿಮಿಷದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಅವಕಾಶ ಪಡೆದರಾದರೂ, ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಗೋಲು ಗಳಿಸಲಾಗದಿದ್ದರೂ ಪಂದ್ಯದಲ್ಲಿ ಮೆಸ್ಸಿ ಅಮೋಘ ಆಟ ಪ್ರದರ್ಶಿಸಿದರು.

- Advertisement -

ಶನಿವಾರ ನಡೆಯುವ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ಘಟ್ಟದ ಪಂದ್ಯದಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ.

ಅರ್ಜೆಂಟೀನಾ ವಿರುದ್ಧ ಸೋತರೂ ಸಹ ಪೋಲೆಂಡ್, ಗ್ರೂಪ್ ಸಿಯಿಂದ ಎರಡನೇ ತಂಡವಾಗಿ ನಾಕೌಟ್ ಹಂತ ಪ್ರವೇಶಿಸಿದೆ. ಮೆಕ್ಸಿಕೊ ಮತ್ತು ಪೋಲೆಂಡ್ ತಲಾ 4 ಅಂಕಗಳನ್ನು ಗಳಿಸಿದ್ದರೂ ಸಹ, ಒಟ್ಟು ಗೋಲುಗಳ ವ್ಯತ್ಯಾಸ ಪೋಲೆಂಡ್ ಕೈ ಹಿಡಿಯಿತು. ಸೌದಿ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಗೆದ್ದರೂ ಮೆಕ್ಸಿಕೋ ಅದೃಷ್ಟ ಕೈ ಹಿಡಿಯಲಿಲ್ಲ.



Join Whatsapp